K2kannadanews.in
https://youtu.be/RPeCl7Npjac?si=SLaQxpBN3dRyiZsX
Political News ರಾಯಚೂರು : ದೇಶದ ಪ್ರಧಾನಿ ಮಾಧ್ಯಮಗಳ ಮುಂದೆ ಯಾವುದು ಮಾತನಾಡುವುದಿಲ್ಲ. ಎಲೆಕ್ಷನ್ ಬಂದಾಗ ಬಿಜೆಪಿ ಅವರ ಮೈ ಮೇಲೆ ದೆವ್ವ ಬಂದುಬಿಡುತ್ತೆ ಅಂತ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ರಾಯಚೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬಿಜೆಪಿಯವರಿಗೆ ಸಾಮಾನ್ಯ ಜ್ಞಾನ ಇಲ್ಲದಂತಾಗಿದೆ. ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಆದ್ರೆ ರಾಜ್ಯದಲ್ಲಿ ನಡೆಯುವ ಸಣ್ಣ ಘಟನೆಗಳಿಗೂ ಪ್ರತಿಕ್ರಿಯೆ ನೀಡುವುದರ ಮೂಲಕ ತಮ್ಮ ಅಸ್ತಿತ್ವ ಸಾಬೀತು ಮಾಡಿಕೊಳ್ಳುತ್ತಿದ್ದಾರೆ.
https://youtu.be/jhu8KfB9eOI?si=ra3-qgatagYUj9Py
ಆರ್.ಅಶೋಕ ಬಾಯಿಗೆ ಬದ್ಧತೆ ಇಲ್ಲ. ಸಂಬಂಧ ಇಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರಿಗೆ ಏನಾದರೂ ಕೆಲಸ ಇದೆಯಾ? ಎಂದು ವಾಗ್ದಾಳಿ ನಡೆಸಿದರು.