LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೂರು ಪಕ್ಷದ ಶಾಸಕರು ಅನುದಾನ ವಿಚಾರದಲ್ಲಿ ಅಸಮಧಾನಿತರಿದ್ದಾರೆ : ಕರೆಮ್ಮ ಜಿ ನಾಯಕ್

K2kannadanews.in

Political News ರಾಯಚೂರು : ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ರಾಜ್ಯದಲ್ಲಿರುವ ಮೂರು ಪಕ್ಷಗಳ ಶಾಸಕರು ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದಾರೆ ಎಂದು ಶಾಸಕಿ ಕರಿಯಮ್ಮ ಜಿ ನಾಯಕ್ ಹೇಳಿದರು.

https://youtu.be/xf76pEdnBTc?si=FJW_HcuYku4VgGFj

ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಕರಿಯಮ್ಮ ಜಿ ನಾಯಕ ಅವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೆಕೆಆರ್ಡಿಬಿ ಅನುದಾನ ಮಾತ್ರ ಬರ್ತಿದೆ, ಅದು ಬಿಟ್ಟರೆ ಬೇರೆ ಯಾವುದು ಅನುದಾನ ಬರುತ್ತಿಲ್ಲ. ದೇವದುರ್ಗ ಕ್ಷೇತ್ರದಲ್ಲಿ ಹಿಂದೆ ಇದ್ದ ಎಲ್ಲಾ ಪಕ್ಷದ ಶಾಸಕರಿಗೆ ಅನುದಾನ ಕೊಟ್ಟಿದ್ದಾರೆ. ನನ್ನ ಹೆಸರು ಕೆಡಿಸಲು ಅನುದಾನ ಕೊಡುತ್ತಿಲ್ಲ ಎಂದು ಶಾಸಕಿ ಆರೋಪಿಸಿದರು. ಸಿಎಂ, ಡಿ ಸಿಎಂ, ಕ್ಯಾಬಿನೆಟ್ ಮಂತ್ರಿಗಳಿಗೆ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಮನವಿ ಮಾಡಿದ್ದೇನೆ. ಗ್ಯಾರಂಟಿ ಕೊಟ್ಟಿದ್ದಾರೆ, ಆದರೆ ಕ್ಷೇತ್ರದಲ್ಲಿ ಹೋದ ವೇಳೆ ಜನ ಅಭಿವೃದ್ಧಿ ಬಗ್ಗೆ ನಮ್ಮನ್ನ ಕೇಳ್ತಾರೆ. ಈವರೆಗೂ ಕೆಕೆಆರ್‌ಡಿಬಿ ಯಲ್ಲಿ 80 ಕೋಟಿ ಮತ್ತು 117 ಕೊಟಿ ಕೊಟ್ಟಿದ್ದು ಬಿಟ್ರೆ ಬೇರೇನೂ ಬಂದಿಲ್ಲ. ಶಾಸಕರ ಅನುದಾನ ವರ್ಷಕ್ಕೆ 50 ಲಕ್ಷ ಬರ್ತಿದೆ ಅದು ಏನಕ್ಕೂ ಸಾಲಲ್ಲ. ನಾನು ಆಯ್ಕೆ ಆದಾಗಿನಿಂದಲೂ ಟಾರ್ಗೆಟ್ ಮಾಡಿದ್ದಾರೆ, ಜನ ಪ್ರಜ್ಞಾವಂತರಿದ್ದಾರೆ ಮುಂದೆ ಗೊತ್ತಾಗುತ್ತೆ‌ ಎಂದು ಅಸಮಾಧಾನ ಹೊರಹಾಕಿದರು.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST