LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ರಾಜಾತಿಥ್ಯ : ಜೈಲಿನಿಂದ್ಲೆ ವಿಡಿಯೋ ಕಾಲ್..

K2kannadanews.in

Renukaswamy murder case ಬೆಂಗಳೂರು : ‌ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ನಟ ದರ್ಶನ್ ರೌಡಿ ಶೀಟರ್​​ಗಳೊಂದಿಗೆ ಬಿಂದಾಸ್ ಆಗಿರುವ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಆದ್ರೆ ಇದೀಗ ವಿಡಿಯೋ ಕಾಲ್​​ ಮಾಡಿರುವ ವಿಡಿಯೋ ಸಹ ರಿವೀಲ್​ ಆಗಿದ್ದು ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆಯಾ ಅನ್ನೋ ಪ್ರಶ್ನೆಗಳು ಮತ್ತಷ್ಟು ದಟ್ಟವಾಗಿದೆ.

https://youtu.be/aFoiKxyHE8E?si=SxzejdDyn1jEaP7j

ಹೌದು ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡಿದ್ದ ರೌಡಿಶೀಟರ್​ಗಳ ಜೊತೆ ಆರಾಮಾಗಿ ಚೇರ್​​ ಮೇಲೆ ಕುಳಿತು ಟೀ ಸೇವಿಸುತ್ತಾ, ಸಿಗರೇಟ್ ಸೇವನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಇದೀಗ ಮತ್ತೆ ದರ್ಶನ್​​ ತನ್ನ ವಿಐಪಿ ಸೆಲ್​​​ನಿಂದಲೇ ತಮ್ಮ ಆಪ್ತರಿಗೆ ವಿಡಿಯೋ ಕಾಲ್ ಮಾಡಿರುವುದು ಬಹಿರಂಗಗೊಂಡಿದೆ. ಜೈಲಿನಲ್ಲಿರುವ ದರ್ಶನ್​ ತನ್ನ ಆಪ್ತರಿಗೆ ಊಟಾ ಆಯ್ತಾ. ಇತ್ಯಾ ದಿನಚರಿಗಳ ಬಗ್ಗೆ ಸನ್ನೆ ಮೂಲಕ ಕೇಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ರೌಡಿಶೀಟರ್​​​ಗಳಾದ ಕುಳ್ಳ ಸೀನು, ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್​​ ಮ್ಯಾನೇಜರ್ ಹಾಗೂ ಕೊಲೆ ಆರೋಪಿಯೂ ಆದ ನಾಗರಾಜನೊಂದಿಗೆ ಬಿಂದಾಸ್ ಆಗಿ ಜೈಲಿನ ಬ್ಯಾರಕ್ ಹೊರಗೆ ಕುಂತಿದ್ದ ಫೋಟೋ ಲೀಕ್ ಆಗಿ ಚರ್ಚೆ ಮತ್ತು ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿಡಿಯೋ ಕೂಡ ವೈರಲ್ ಆಗಿದೆ.

https://youtu.be/YnfyO7VAcEI?si=-7nZadsfKKzbw5bR
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST