LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಆತ್ಮಹತ್ಯೆ..

K2kannadanews.in

robot suicide ದಕ್ಷಿಣ ಕೊರಿಯಾ : ನಾವು ನೀವೆಲ್ಲ ಹಲವಾರು ವಿಚಾರಗಳಿಗೆ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಸುದ್ದಿಗಳನ್ನು (News) ಕೇಳಿದ್ದೇವೆ. ಪ್ರಪಂಚದಲ್ಲಿ ಮೊದಲ ಪ್ರಕರಣವಾಗಿ (World fist case), ಕೆಲಸದ ಒತ್ತಡ (Work stress) ತಾಳಲಾರದೆ ರೋಬೋಟ್ ಒಂದು ಆತ್ಮಹತ್ಯೆ (robot suicide) ಮಾಡಿಕೊಂಡಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

ಈ ರೀತಿಯ ವಿಚಿತ್ರ ಕೇಸ್​ ಬೆಳಕಿಗೆ ಬಂದಿರುವುದು ಮಧ್ಯ ದಕ್ಷಿಣ ಕೊರಿಯಾದಲ್ಲಿ ಅನ್ನೋದು ಗಮನಾರ್ಹ. ತನ್ನಿಂದ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ ಎಂದು ಒತ್ತಡದಿಂದ ಬೇಸತ್ತು ರೋಬೋಟ್​ ಮೆಟ್ಟಿಲುಗಳಿಂದ ಬಿದ್ದು ಸೂಸೈಡ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿ ಪ್ರಕಾರ ರೋಬೋಟ್​​​ ಸೌತ್​ ಕೊರಿಯಾದ ಗೌಮಿ ನಗರದ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಕೆಲಸ ಮಾಡುತ್ತಿತ್ತು.

https://youtu.be/9a_tDzOxyPI?si=z1xwEPqvbxmRSVaw

ಸುಮಾರು ಒಂದು ವರ್ಷದಿಂದ ರೋಬೋಟ್​​​ ಆಡ್ಮಿನಿಸ್ಟ್ರೇಷನ್​​​ ಕೆಲಸದ ಭಾಗವಾಗಿತ್ತು. 5 ದಿನಗಳ ಹಿಂದೆ ರೋಬೋಟ್​​ ಮೆಟ್ಟಿಲುಗಳ ಮೇಲಿಂದ ಬಿದ್ದು ಸೂಸೈಡ್​ ಮಾಡಿಕೊಂಡಿದೆ. ರೋಬೋಟ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರ್ಕಿಂಗ್​ ಕಂಡೀಷನ್​ನಲ್ಲಿ ಇರಲಿಲ್ಲ. ರೋಬೋಟ್​​​ ಓಡಿ ಹೋಗಿ ಸೂಸೈಡ್​​ ಮಾಡಿಕೊಂಡಿದೆ ಎಂದು ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ. ಹೆಚ್ಚು ಕೆಲಸ ಮಾಡಿಸುತ್ತಿದ್ದ ಕಾರಣ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತು. ಇದನ್ನು ಡಿಸೈನ್​ ಮಾಡಿದ ಕಂಪನಿ ಕೂಡ ಅದೇ ಹೇಳುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೌತ್​ ಕೊರಿಯಾ ಸರ್ಕಾರಿ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST