LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಾರಿ ಬೈಕ್ ನಡುವೆ ಭೀಕರ ಅಪಘಾತ ಎರಡು ತುಂಡಾದ ಬೈಕ್ : ಸವಾರ ಸಾವು..

K2kannadanews.in

Accident News ರಾಯಚೂರು : ರಾಯಚೂರು ಮಂತ್ರಾಲಯ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಜೊರಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೆರೆ ಬೂದೂರು ಗ್ರಾಮದ ಬಳಿ ಜರುಗಿದೆ.

https://youtu.be/r0vK08S0MBc?si=LwpH4DVdhGbgRmFq

ಹೌದು ರಾಯಚೂರು ತಾಲೂಕಿನ ಕೆರೆ ಬೂದೂರು ಗ್ರಾಮದ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ನಲ್ಲೂರಿನ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಶೋಕ್ ಬಿಲ್ಲಳ್ಳಿ(24) ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ. ಆಂದ್ರದ ಆಲೂರಿನಿಂದ ರಾಯಚೂರಿನ ಕಲ್ಲೂರಿಗೆ ಹೊರಟಿದ್ದಿದ್ದ ಬೈಕ್ ಸವಾರ. ಈ ವೇಳೆ ಮಂತ್ರಾಲಯ ಕಡೆಗೆ ಹೊರಟಿದ್ದ ಲಾರಿ ಕೆಟಿಎಂ ಬೈಕಿಗೆ ಡಿಕ್ಕಿ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕೆಟಿಎಂ ಬೈಕ್ ಎರಡು ತುಂಡುಗಳಾಗಿದೆ. ಅಲ್ಲದೆ ಸ್ವಲ್ಪ ದೂರ ಉಜ್ಜಿಕೊಂಡು ಹೋದ ಕಾರಣ ಬೈಕ್ ಸುಟ್ಟು ಕರಗಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಡಪನೂರು ಪೊಲೀಸರು, ಸ್ಥಳೀಯರಿಂದ ಮಾಹಿತಿ ಪಡೆದು ಪರಿಶೀಲನೆ ಮಾಡಿ, ಮೃತ ದೇಹವನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇಡಪನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST