LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಲದ ಸುಳಿಯಿಂದ ಹೊರಬರಲು ಪತ್ನಿಯ ದೇಹ ಮಾರಾಟಕ್ಕೆ ಪತಿಯತ್ನಿಸಿದ್ದ ಪತಿ..?

K2kannadanews.in


https://youtu.be/3graL0LHlGs?si=dU9miAG__QNmwVWP

CRIME NEWS ಯಾದಗಿರಿ : ಪರ ಪುರುಷನ ಜೊತೆ ಮಲಗಲು ನಿರಾಕರಿಸಿದ ಪತ್ನಿಯನ್ನು ಪತಿ ಮಹಾಶಯನೊಬ್ಬ ಉಸಿರುಗಟ್ಟಿಸಿ ಕೊಂದಿರುವ ಘಟನೆ ಗಂಗನಾಳ ಗ್ರಾಮದಲ್ಲಿ ನಡೆದಿದೆ.


ಯಾದಗಿರಿ ಜಿಲ್ಲೆಯ ಗಂಗನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶರಣಬಸಮ್ಮ ಕೊಲೆಯಾದ ಮಹಿಳೆ. ಈಕೆಯನ್ನು ಪತಿ ಭೀಮಣ್ಣ ಕೊಲೆ ಮಾಡಿದ್ದಾನೆ. ಈ ಘಟನೆ ಜುಲೈ ತಿಂಗಳಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಭೀಮಣ್ಣ ವಿಪರೀತ ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲದ ಸುಳಿಯಿಂದ ಹೊರಬರಲು ಪತ್ನಿಯ ದೇಹ ಮಾರಾಟಕ್ಕೆ ಪತಿ ಯತ್ನಿಸಿದ್ದಾನೆ. ಅನುಮಾನಗೊಂಡಿದ್ದ ಶಹಾಪೂರ ಪೊಲೀಸರು ಪ್ರಕರಣ ಭೇದಿಸಿದ್ದಾರೆ.


https://youtu.be/gC41bTVq9YY?si=YUflGz6QrrYdmnHN

ಜು.25 ರಂದು ಪತ್ನಿಯೊಂದಿಗೆ ಗಂಗನಾಳ ಗ್ರಾಮಕ್ಕೆ ಭೀಮಣ್ಣ ಬಂದಿದ್ದ. ಮಾವ-ಅತ್ತೆಯ ಮನೆಯಲ್ಲಿ ಬಾಡೂಟ ಸವಿದು ಜೋಡಿ ಮಲಗಿತ್ತು. ತಡರಾತ್ರಿ 12ಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ನಾಟಕವಾಡಿದ್ದ. ಇತ್ತ ಘಟನೆಯ ಬಳಿಕ ಶರಣಬಸಮ್ಮ ಸಹೋದರಿ ಪೊಲೀಸರ ಬಳಿ, ಬೇರೆಯವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆಂದು ಶರಣಬಸಮ್ಮ ತನ್ನ ಸಹೋದರಿಗೆ ದುಃಖ ಹೇಳಿಕೊಂಡಿದ್ದಳು. ಮರ್ಯಾದೆ ಪ್ರಶ್ನೆ, ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಹೇಳಿಕೊಂಡಿದ್ದಳು ಎಂದು ತಿಳಿಸಿದ್ದ ತಾಳೆ. ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಕರಣ ಬೇದಿಸಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST