LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಟ್ಟಿ : ರಸ್ತೆ ಬಿಟ್ಟು ಕಂದಕಕ್ಕೆ ಉರುಳಿದ ಬಸ್..

K2kannadanews.in


Accident News ಲಿಂಗಸೂಗೂರು : ರಸ್ತೆಯಲ್ಲಿ‌ ಸಾಗುತ್ತಿದ್ದ ಕುರಿಗಳ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಕಂದಕಕ್ಕೆ ಉರುಳಿದ ಘಟನೆ ಪೈದೊಡ್ಡಿ ಕ್ರಾಸ್ ಬಳಿ ಜರುಗಿದೆ.


https://youtu.be/4IConBonG7Y?si=9bJH4oo1QFmy-LgX

 

ಹೌದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಸಮೀಪದ ಪೈದೊಡ್ಡಿ ಕ್ರಾಸ್ ಬಳಿ ಅಪಘಾತ ಜರುಗಿದ್ದು, ಹತ್ತಿರ ಕುರಿ ಅಡ್ಡಬಂದಿದ್ದರಿಂದ ಹಾವೇರಿ ಡಿಪೊಗೆ ಸೇರಿದ ಬಸ್ಸು ಕಂದಕ್ಕೆ ಉರುಳಿ ಬಿದ್ದಿದ್ದು, ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಹಾವೇರಿಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಬಸ್ ಕುರಿಯ ಜೀವ ಉಳಿಸಲು ನಿಯಂತ್ರಣ ತಪ್ಪಿ ಬಸ್ ರಾ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ.


https://youtu.be/tEM6FOX2rMs?si=7723DoWfyIfyDVfB

ಅಪಘಾತದಿಂದ ರಸ್ತೆಗೆ ಬಸ್ ಅಡ್ಡಲಾಗಿ ನಿಂತ ಕಾರಣ, ರಾಜ್ಯ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ವರಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಟ್ಟಿ ಪೊಲೀಸರು, ಬಸ್ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿದರು. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST