LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೋನ್‌ನಲ್ಲಿ ಮಾತನಾಡಿದ ವಿದ್ಯಾರ್ಥಿನಿ ಫೋನ್ ಕಿತ್ತುಕೊಂಡ ಶಿಕ್ಷಕಿಗೆ ಚಪ್ಪಲಿ ಹೊಡೆಯೋದಾ..

K2kannadanews.in

https://youtube.com/shorts/-yowTx8KbS0?si=3UoG44B_UtWj_3GE

Crime News ವೈರಲ್ ನ್ಯೂಸ್ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ಫೋನ್‌ನಲ್ಲಿ ಮಾತನಾಡುವಾಗಿ ಉಪನ್ಯಾಸಕಿ ಆಕೆಯ ಫೋನ್ ಕಿತ್ತುಕೊಂಡಿದ್ದಾಳೆ. ಆಗ ಕೋಪಗೊಂಡ ವಿದ್ಯಾರ್ಥಿನಿ ಶಿಕ್ಷಕಿಗೆ ಚಪ್ಪಿಲಿಯಲ್ಲಿ ಹೊಡೆದ ವೀಡಿಯೋ ವೈರಲ್ ಆಗಿದೆ.

ಈ ಒಂದು ವೀಡಿಯೋದಲ್ಲಿ ನೋಡಿದಾಗ ಶಿಕ್ಷಕಿ ಮತ್ತು ವಿದ್ಯಾರ್ಥಿನಿ ಮಧ್ಯ ವಾಗ್ವಾದ ನಡೆದಿದೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ಪೋನ್ ನಲ್ಲಿ ಮಾತನಾಡುತ್ತಿದ್ದಾಗ ಉಪನ್ಯಾಸಕಿ ಪೋನ್ ಕಿತ್ತುಕೊಂಡಿದ್ದಾರೆ. ಆಗ ವಿದ್ಯಾರ್ಥಿನಿ ಫೋನ್ ನೀಡುವಂತೆ ಒತ್ತಾಯಿಸಿದ್ದಾಳೆ. ಈ ದೃಶ್ಯ ಇತರ ವಿದ್ಯಾರ್ಥಿಗಳ ಫೋನ್‌ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿ ತನ್ನ ಫೋನ್ 12,000 ರೂಪಾಯಿ ಮೌಲ್ಯದ್ದಾಗಿದೆ ಕೊಟ್ಟುಬಿಡಿ ಎಂದು ಉಪನ್ಯಾಸಕಿಯೊಂದಿಗೆ ಜಗಳ ಆಡಿದ್ದಾಳೆ. ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದಾಗ ವಿದ್ಯಾರ್ಥಿನಿ ಬಾಯಿಗೆ ಬಂದಂತೆ ನಿಂದಿಸಿದ್ದಾಳೆ.

https://youtu.be/VM8Ko7yExtA?si=2qUYreHqSUmB0DZ-

ಆ ಒಂದು ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಕೋಪಗೊಂಡ ವಿದ್ಯಾರ್ಥಿನಿ ಕಾಲಲ್ಲಿ ಇದ್ದ ಚಪ್ಪಲಿ ಕಳಚಿ ಉಪನ್ಯಾಸಕಿಗೆ ಹೊಡೆದಿದ್ದಾಳೆ. ಈ ದೃಶ್ಯವು ಅಲ್ಲಿದ್ದ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬೆಚ್ಚಿಬೀಳಿಸಿದೆ. ಶಿಕ್ಷಕಿ ಕೂಡ ಆಕೆಯ ಮೇಲೆ ಕೈ ಮಾಡಲು ಮುಂದಾದರು. ಆಗ ಜಗಳ ವಿಕೋಪಕ್ಕೆ ಹೋದಾಗ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಅವರ ಜಗಳವನ್ನು ಬಿಡಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST