K2kannadanews.in
Crime News ರಾಯಚೂರು : ನಗರದ ಗಂಗಾನಿವಾಸ ಹಾಗೂ ಟ್ಯಾಂಕ್ ಬಂಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ಮಗು ಸೇರಿ 15 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ದಾಳಿಯಲ್ಲಿ ಹುಚ್ಚುನಾಯಿ ಕಡಿದಿರಬಹುದಾದ ಶಂಕೆ ಎದುರಾಗಿದ್ದು, ಗಾಯಾಳುಗಳು ಆತಂಕಗೊಂಡಿದ್ದಾರೆ.
https://youtu.be/7rNswzfyZQ8?si=Lz7DVrvBvEiN5HHT
ನಾಯಿಗಳು ಸಿಕ್ಕಸಿಕ್ಕವರ ಮೇಲೆ ದಾಳಿ ಕೈ, ಕಾಲಿಗೆ ಹಾಗೂ ಎಗರಿ ಗಾಯಗೊಳಿಸಿವೆ. ಲಿಂಗಪ್ಪ, ಶರಣಪ್ಪ, ರಮೇಶ್, ಮೊಹಮದ್ ಗೌಸ್ ಸೇರಿ 15 ಜನರು ಗಾಯಗೊಂಡಿದ್ದು, ಪಾಲಿಕೆ ವಿರುದ್ದ ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾದಚಾರಿಗಳ ಮೇಲೆ ನಾಯಿಗಳ ಹಿಂಡು ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
https://youtube.com/shorts/f7MPOIdxLbg?si=MbcTAToMY-aIKPLn