K2kannadanews.in
https://youtu.be/wenul-IYYlY?si=6YtFvqNHoUUvBXkn
Train accident ಚನ್ನೈ : ಬಾಗಮತಿ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಮಧ್ಯೆ ಚೆನ್ನೈಗೆ ಸಮೀಪವಿರುವ ಕವರೈಪೆಟ್ಟೈ ಬಳಿ ನಿನ್ನೆ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಏಳು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ರೈಲ್ವೆ ತಿಳಿಸಿದ್ದು, ವಿಶೇಷ ರೈಲು ಮುಖಾಂತರ ಎಲ್ಲಾ ಪ್ರಯಾಣಿಕರನ್ನ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ ಅಧಿಕಾರಿಗಳು.
ಅಪಘಾತದಲ್ಲಿ ಗಾಯಾಳುಗಳ ಪೈಕಿ ಗಂಭೀರ ಗಾಯಗೊಂಡ ಮೂವರು ಪ್ರಯಾಣಿಕರನ್ನು ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುವ ನಾಲ್ವರು ಪೊನ್ನೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈಲ್ವೆಯ ಅಧಿಕೃತ ಹೇಳಿಕೆಯ ಪ್ರಕಾರ ಎಲ್ಲಾ ಏಳು ಮಂದಿ ಪರಿಹಾರಗಳಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://youtu.be/Fzfgz5dS6c4?si=Mzrvf-T-HLgn2lMa
ಹಳಿತಪ್ಪಿದ 13 ಬೋಗಿಗಳಲ್ಲಿ ಸಿಲುಕಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಮತಿ ಎಕ್ಸ್‌ಪ್ರೆಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಪೊನ್ನೇರಿಗೆ ಮತ್ತು ನಂತರ ಚೆನ್ನೈ ಸೆಂಟ್ರಲ್‌ಗೆ ಎರಡು ವಿಶೇಷ ಉಪನಗರ ರೈಲುಗಳ ಮೂಲಕ ಮುಂಜಾನೆ ಸಾಗಿಸಲಾಯಿತು.