LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂಧನೂರು : ಷಾ ಹ್ಯೂಂಡೈಯ್ ಕಾರ್ ಶೋರೂಮ್ ಮೇಲೆ ದಾಳಿ ಕಾರು, ಕಛೇರಿ ಜಖಂ

K2kannadanews.in

Crime News ಸಿಂಧನೂರು : ಶೋರೂಮ್ ನಲ್ಲಿ ಕಾರು ಸರಿಯಾಗಿ ರಿಪೇರಿ ಮಾಡಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ, ಜಗಳವಾಡಿ ಮಾತಿಗೆ ಮಾತು ಬೆಳೆದು ಶೋರೂಮ್ ಮೇಲೆ ದಾಳಿ ಮಾಡಿ, ಅಲ್ಲಿದ್ದ ಕಾರುಗಳು ಮತ್ತು ಕಛೇರಿ ಜಖಂ ಮಾಡಿದ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ.

https://youtu.be/pQ8AyAwFNNE?si=WawglLqRCrSB0ejz

ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಕಳೆದ 16ರಂದು ಜರುಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿರುವ ಆನಂದ್ ಶಾ ಮಾಲೀಕರಿಗೆ ಸೇರಿದ ಷಾ ಹ್ಯೂಂಡೈಯ್ ಕಾರ್ ಶೋರೂಮ್ ಗೆ ಉದ್ಬಾಳ ಗ್ರಾಮದ ವೀರೇಶ್ ಕಮಟ‌ರ್(34), ತನ್ನ ವೆನಿಯೋ ಕಾರ್ ಡಿಪಿಎಫ್ ರೀ ಜನರೇಷನ್‌ ಕಾರಿನಲ್ಲಿ ಸಮಸ್ಯೆ ಕಂಡು ಬಂದಿದ್ದು, ರಿಪೇರಿ ಕುರಿತು ಶೋ ರೂಮ್ ಗೆ ರಿಪೇರಿಗೆ ನೀಡಿದ್ದ, ಆದರೇ ರಿಪೇರಿ ಸರಿಯಾಗಿ ಮಾಡಿಲ್ಲ ಎಂದು ಜಗಳ ಕಾಯುತ್ತಾನೆ.

ಶೋ ರೂಮ್ ಮೆಕಾನಿಕ್ ಸಲ್ಮಾನ್ ನೊಂದಿಗೆ ಮಾತಿನ ಚಕಮಕಿಯಾಗಿ, ಕೈ ಕೈ ಮಿಲಾಯಿಸಿಕೊಂಡ ಗಲಾಟೆ ಮಾಡಿಕೊಳ್ಳುತ್ತಾನೆ. ನಂತರ ವೀರೇಶ ಮತ್ತು ಆತನ ಸಂಗಡಿಗರು ಸೇರಿ ಶೋರೂಂಗೆ ರಿಪೇರಿಗೆ ಬಂದಿರುವ ಆರ ರಿಂದ ಎಂಟು ಕಾರುಗಳ ಗ್ಲಾಸುಗಳನ್ನು ಹೊಡೆದು ಹಾಕಿ, ಶೋರೂಮ್ ನ ಕ್ಯಾಬಿನ್ ಕ್ಲಾಸ್ ಮತ್ತು ಕಂಪ್ಯೂಟರ್ ಗಳನ್ನು ಜಖಂಗೊಳಿಸಿದ ಘಟನೆ ನಡೆದಿದೆ. ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST