LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೊಬೈಲ್ ಚಾರ್ಜರ್ ಬಿಟ್ಟಿದ್ದ ವೇಳೆ ಶಾಕ್ : ಯುವಕ ಸಾವು

K2kannadanews.in

Mobile charger shock ಹೈದರಾಬಾದ್ : ರಾತ್ರಿ ವೇಳೆ ಮೊಬೈಲ್ ಚಾರ್ಜಿಂಗ್ ಇಟ್ಟು ಮಲಗುವವರು ಮತ್ತು ಮೊಬೈಲ್ ಚಾರ್ಜರ್ ತುಂಡಾಗಿ ಕಟ್ಟಾಗಿದ್ದರೂ ಅದನ್ನು ರಿಪೇರಿ ಮಾಡಿ ಚಾರ್ಜಿಂಗ್ ಇಟ್ಟು ಮಲಗುವವರು ಈ ಸುದ್ದಿಯನ್ನು ಓದಲೇಬೇಕು .

https://youtu.be/k1_LOlKZppo?si=-1C7kX3DcWq3fVf5

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಾಲೋತ್ ಅನಿಲ್ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶುಕ್ರವಾರ ಈ ಒಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ. ಮೊಬೈಲ್‌ ಚಾರ್ಜಿಂಗ್ ಆದ ನಂತರ ಹಾಗೆ ಪ್ಲಗ್ ಗೆ ಬಿಟ್ಟಿದ್ದ. ಅದೂ ಕೂಡ ತಾನೂ ಮಲಗುವ ಹಾಸಿಗೆಯ ಮೇಲೆ ಹರಡಿದ್ದ. ನಂತರ ಅಲ್ಲಿಯೇ ಮಲಗಿದ್ದಾನೆ, ಘಾಡ ನಿದ್ರೆಗೆ ಜಾರಿದಾಗ ವೈರ್‌ ಮೇಲೆ ಮಲಗಿದ್ದಾನೆ ಆಗ ಶಾಕ್‌ಗೆ ಒಳಗಾಗಿದ್ದಾನೆ.

ಈ ಬಗ್ಗೆ ತಿಳಿದು ಮನೆಯವರು ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರದೊಯ್ದಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಗಗಿ ರಾತ್ರಿ ವೇಳೆ ಚಾರ್ಜಿಂಗ್ ಇರುವ ಎಲ್ಲರೂ ಕೂಡ ತಪ್ಪದೇ ಮಲಗೋ ವೇಳೆ ಅದನ್ನ ಲಗ್ನಿಂದ ತೆಗೆದು ಮಲಗುವುದು ಒಳಿತು. ಮತ್ತು ಒಳಗಿನ ತಂತಿ ಕಾಣುವಂತೆ ಕಟ್ಟಾಗಿದ್ದರೆ ಕೂಡಲೇ ಅದನ್ನು ಉಪಯೋಗಿಸುವುದು ನಿಲ್ಲಿಸಿ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST