LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆರಾಯನ ಆರ್ಭಟ ಮನೆಗೆ ನುಗ್ಗಿದ ನೀರು : ನಿವಾಸಿಗಳ ಪರದಾಟ..

K2kannadanews.in

https://youtu.be/-vuL0MGMni0?si=ctLcRUh7AvdonXpN

Heavy rain ರಾಯಚೂರು : ಮಳೆರಾಯನ ಆರ್ಭಟಕ್ಕೆ ರಾಯಚೂರು ನಗರ (City) ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ, ಇಡೀ ರಾತ್ರಿ ನಿದ್ದೆಗೆಟ್ಟು ನೀರಿನಲ್ಲಿ ಕಾಲ ಕಳೆದ ಘಟನೆ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯಾದ್ಯಂತ ನಿನ್ನೆ ಸಂಜೆ (evening) 6 ಗಂಟೆಯಿಂದ ಮಧ್ಯರಾತ್ರಿ (Midnight) 12 ಗಂಟೆಯವರೆಗೆ ಮಳೆರಾಯನ (Heavy rain) ಆರ್ಭಟ ಜೋರಾಗಿತ್ತು. ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲ ಪ್ರದೇಶದ ಮನೆಗಳಿಗೆ (House) ನೀರು ನುಗ್ಗಿದೆ. ಮನೆಯೊಳಗೆ ಸುಮಾರು ಎರಡು ಮೂರು ಅಡಿಯಷ್ಟು ನೀರು ಬಂದಿದ್ದು ಮನೆಯಲ್ಲಿನ ಸಾಮಗ್ರಿಗಳು (material's) ಸೇರಿದಂತೆ ಆಹಾರ ಧಾನ್ಯಗಳು (Food items) ನೀರು ಪಾಲಾಗಿವೆ.

https://youtube.com/shorts/2F5N5p7Ob1o?si=ZTYpP6NXGSYUgAEa

ಮನೆ ಬಿಟ್ಟು ಹೊರ ಬಂದರೆ ಮಳೆ, ಮನೆಯಲ್ಲೇ ಮಲಗಬೇಕು ಎಂದರೆ ಮನೆ ತುಂಬಾ ನೀರು, ಮಕ್ಕಳಿಂದ (Children) ಹಿಡಿದು ವಯಸ್ಕರವರೆಗೂ ರಾತ್ರಿ ಇಡೀ ನೀರಿನಲ್ಲಿ ಕಾಲ ಕಳೆದಿದ್ದಾರೆ (Time spent in water). ಮಳೆ ನಿಂತ ಮೇಲೆ ಇಡೀ ರಾತ್ರಿ ಮನೆಯಲ್ಲಿನ ನೀರು ಹೊರ ಹಾಕುವುದೇ ಒಂದು ಕೆಲಸವಾಗಿತ್ತು. ರಾಜ ಕಾಲವೆ ಪಕ್ಕದಲ್ಲೆ ಇದ್ದರು ಸ್ವಚ್ಛಗೊಳಿಸದ ಹಿನ್ನೆಲೆ ಕಸ ಕಡ್ಡಿ ತುಂಬಿಕೊಂಡು ನೀರು ಹೋಗದ ಕಾರಣ ಮನೆಗಳಿಗೆ ನೀರು ನುಗುತ್ತಿವೆ ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST