K2kannadanews.in
[video width="848" height="480" mp4="https://k2kannadanews.in/wp-content/uploads/2024/08/Video_20240828072838494_by_vidcompact.mp4"][/video]
Raichur Municipal ನಗರಸಭೆ ರಾಯಚೂರು : ಕಳೆದ 18 ತಿಂಗಳಿನಿಂದ ಖಾಲಿ ಇದ್ದ ರಾಯಚೂರು ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ರಾಯಚೂರು ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.
https://youtu.be/QpUmnbNULyI?si=WhtyxpdE5uMp50sq
ರಾಯಚೂರು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮುಡಿಗೇರಿದ ರಾಯಚೂರು ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ನರಸಮ್ಮ ಮಾಡಗಿರಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಸಾಜಿದ್ ಸಮೀರ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
https://youtu.be/gP7c4rpEI_E?si=DjcHGWpOPp9dpMTX
ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ಕಾರಣ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಇಂದು ಚುನಾವಣೆ ಇದ್ದರು ನಗರಸಭೆ ಕಚೇರಿ ಬಳಿ ಬಿಜೆಪಿ ಸದಸ್ಯರು ಸುಳಿಯಲೇ ಇಲ್ಲ. ಕಾಂಗ್ರೆಸ್ 11 , ಬಿಜೆಪಿ 12 ,ಜೆಡಿಎಸ್ 3 , ಪಕ್ಷೇತರ 9 ಸೇರಿ ಒಟ್ಟು 35 ಜನ ಸದಸ್ಯರು ಹೊಂದಿರುವ ರಾಯಚೂರು ನಗರ ಸಭೆ. ಈ ವೇಳೆ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ್ ನಾಯಕ್ ಭಾಗಿಯಾಗಿದ್ದರು. ಗೆಲುವಿನ ನಂತರ ಭಾರಿ ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಬ್ರಮಿಸಿದರು.