LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು : ಶಿಕ್ಷಕಿಗೆ ಅಶ್ಲೀಲ ಸಂದೇಶ ಕಳಿಸಿದ ಮುಖ್ಯ ಶಿಕ್ಷಕ ಅಮಾನತ್ತು..

K2kannadanews.in

teacher suspend ರಾಯಚೂರು: ಸಹ ಶಿಕ್ಷಕಿಗೆ ಅಶ್ಲೀಲ ಸಂದೇಶ (obscene messages) ಕಳಿಸಿ ಮಂಚಕ್ಕೆ ಕರೆದಿದ್ದ ಆದರ್ಶವಿದ್ಯಾಲಯ (Adarsha vidyalay) ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಮೆಹಬೂಬ್‌ ಅಲಿ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

https://youtu.be/tWd1M0H4w5Y?si=2-s8RJvAdWH5H2Ms

ರಾಯಚೂರಿನ (Raichur) ಯರಮರಸ್‌ ಬಳಿಯ ಆದರ್ಶವಿದ್ಯಾಲಯ ಶಾಲೆಯ ಶಾಲೆಯಲ್ಲಿ ಘಟನೆ ನಡೆದಿತ್ತು. ಕಿರುಕುಳಕ್ಕೆ ಒಳಗಾದ ಶಿಕ್ಷಕಿ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಕೊಟ್ಟಿದ್ದರು. ಅಲ್ಲದೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು. ಸುದ್ದಿಯಿಂದ ಎಚ್ಚೆತ್ತ ಅಧಿಕಾರಿಗಳು, ಇದನ್ನು ಪರಿಶೀಲಿಸಿ ಮೆಹಬೂಬ್‌ ಅಲಿ ಅವರೇ ಬರೆದುಕೊಟ್ಟ ತಪ್ಪೊಪ್ಪಿಗೆ ಪತ್ರವನ್ನು ಉಲ್ಲೇಖಿಸಿ ಶಿಕ್ಷಣಾಧಿಕಾರಿ ಅಮಾನತಿಗೆ ಶಿಫಾರಸು ಮಾಡಿದ್ದರು.

ಬಿಇಒ (BEO) ನೀಡಿದ ಶಿಫಾರಸ್ಸು ವರದಿಯನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (DDPI) ಕೆ.ಡಿ.ಬಡಿಗೇರ ಅವರು ಮೆಹಬೂಬ ಅಲಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

https://youtu.be/9GWZ8dtaBjU?si=1pf9zLX_BhU3_phl

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST