LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಾಲಹಳ್ಳಿ : ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ : 43 ಬೈಕ್‌, 1.10 ಲಕ್ಷ ಜಪ್ತಿ..

K2kannadanews.in

gambling ದೇವದುರ್ಗ : ಅಕ್ರಮವಾಗಿ (illegal) ಜೂಜಾಟ ಆಡುತ್ತಿದ್ದ (gambling) ಅಡ್ಡೆ ಮೇಲೆ ಜಾಲಹಳ್ಳಿ ಪೊಲೀಸರು (Police) ದಾಳಿ (Attack) ಮಾಡಿ ನಗದು ಬೈಕ್ (Bike) ವಶಪಡಿಸಿಕೊಂಡು 12 ಜನರ ವಿರುದ್ಧ ಪ್ರಕರಣ (case) ದಾಖಲಿಸಿದ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

https://youtu.be/4oiBfhRleOs?si=9YgLyjQ4_MlLC8Pw

ಹೌದು ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಜಾನಮರಡಿ ಗ್ರಾಮದಲ್ಲಿ ದಾಳಿ ಮಾಡಲಾಗಿದೆ. ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ (Information) ಮದ ಹಿನ್ನಲೆ, ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 1.10 ಲಕ್ಷ ನಗದು (Money) ಹಾಗೂ 43 ಬೈಕ್‌ಗಳನ್ನು ಜಪ್ತಿ ಮಾಡಿ ಟ್ರ್ಯಾಕ್ಟರ್ ಮುಖಾಂತರ ಜಾಲಹಳ್ಳಿ ಪೊಲೀಸ್ ಠಾಣೆಗೆ ತಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಿಬ್ಬಂದಿ ನೇತೃತ್ವದ ತಂಡ ಹಾಗೂ ಜಾಲಹಳ್ಳಿ ಪಿಎಸ್‌ಐ ನೇತೃತ್ವದ ತಂಡ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಹಲವು ಜೂಜಾಟದಲ್ಲಿ ತೊಡಗಿದ್ದ ಜನ ಪೊಲೀಸರನ್ನು ನೋಡುತ್ತಿದ್ದಂತೆ, ಬೈಕ್ ಗಳನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದಾರೆ. ಜಪ್ತಿ ಮಾಡಿದ ಬಹುತೇಕ ವಾಹನಗಳಿಗೆ ವಿಮೆ ಮಾಡಿಸಿಲ್ಲ. ತಕ್ಷಣ ಬೈಕ್ ಮಾಲೀಕರನ್ನು ಕರೆದು ವಿಮಾ ಕಂತು ಪಾವತಿಸಲು ಸೂಚಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂದಿಸಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

https://youtu.be/w3acxPIPC00?si=FgKj2Ig2X6eN2f2F
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST