LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಟಾಟಾಏಸ್‌ ಡಿಕ್ಕಿ : ಡಿಕ್ಕಿ ರಭಸಕ್ಕೆ ತಾಯಿ ದಾರುಣವಾಗಿ ಸಾವು..

K2kannadanews.in

Accident News ಲಿಂಗಸೂಗೂರು : ಪಾದಯಾತ್ರೆ ಹೊರಟಿದ್ದ ತಾಯಿ (mother), ಮಗಳಿಗೆ ಟಾಟಾಏಸ್‌ Tata ace vehicle) ವಾಹನ ಡಿಕ್ಕಿ (Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ತಾಯಿ ದಾರುಣವಾಗಿ ಮೃತಪಟ್ಟರೆ (Death), ಮಗಳಿಗೆ ಗಂಭೀರ ಗಾಯವಾಗಿದೆ. ನಾಗಲಾಪೂರು ಗ್ರಾಮ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸೂಗೂರು (Lingasuguru) ತಾಲೂಕಿನ ನಾಗಲಾಪೂರು ಗ್ರಾಮದ ಬಳಿ ನಡೆದ ಘಟನೆಯಲ್ಲಿ ನಂದಿಹಾಳ ಗ್ರಾಮದ ನಿವಾಸಿ ಭಾಗ್ಯಮ್ಮ (35) ಅಪಘಾತದಲ್ಲಿ (Accident) ಮೃತಪಟ್ಟವರು. ಭಾಗ್ಯಮ್ಮಳ ಮಗಳು ಸಾವು - ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ತಲೆಗೆ ಗಂಭೀರ ಗಾಯವಾಗಿದ್ದು (injured), ಆಕೆಗೆ ಚಿಕಿತ್ಸೆ ಮುಂದುವರಿದಿದೆ.

https://youtu.be/7rWAOvFVGdo?si=5va3rGrqDODYkXab

ಶ್ರಾವಣ ಮಾಸದ ಹಿನ್ನೆಲೆ, ಹನುಮಾನ್ ದೇವಸ್ಥಾನಕ್ಕೆ (Temple) ತಾಯಿ-ಮಗಳು ಇಬ್ಬರೂ ಪಾದಯಾತ್ರೆ ಹೊರಟಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವು ಇವರಿಬ್ಬರಿಗೂ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದವರೇ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ (postmatam) ರವಾನಿಸಿದ್ದಾರೆ. ಈ ಸಂಬಂಧ ಮುದಗಲ್ ಪೊಲೀಸ (mudugal police) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST