K2kannadanews.in
beer bottles ಸಿರವಾರ : ಶಾಂತಿ ಸೌಹಾರ್ದ ಕದಡುವ ಕೆಲಸ ಜರುಗಿದ್ದು, ಮಜ್ಜಿದ್ ಮೇಲೆ ಬೀಯರ್ ಬಾಟಲ್ ಎಸೆದು ಕಿಡಿಗೇಡಿಗಳು ಪರಾರಿಯಾದ ಘಟನೆ ಸಿರವಾರ ಪಟ್ಟಣದಲ್ಲಿ ನಡೆದಿದೆ.
[video width="848" height="480" mp4="https://k2kannadanews.in/wp-content/uploads/2024/07/VID-20240731-WA0004.mp4"][/video]
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ರಾತ್ರಿ ನಡೆದ ಘಟನೆ ನಡೆದಿದ್ದು, ಸಿರವಾರ ನೂತನ ಬಸ್ ನಿಲ್ದಾಣದ ಬಳಿ ಇರುವ, ಫಿರ್ದೋಸ್ ಮಜ್ಜಿದ್ ಮೇಲೆ ಬೀಯರ್ ಬಾಟಲ್ ಗಳನ್ನು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ರಾತ್ರಿ 8.30 ರ ಹೊತ್ತಿಗೆ ನಮಾಜ್ ಮಾಡುವ ಸಮಯದಲ್ಲಿ ಕಿಡಿಗೇಡಿಗಳಿಂದ ಕೃತ್ಯ ಎಸಗಲಾಗಿದೆ. ಬೀಯರ್ ಬಾಟಲ್ ಎಸೆದ ಕಾರಣ ಮಜ್ಜಿದ್ ಆವರಣ ಗಾಜುಗಳಿಂದ ತುಂಬಿದೆ.
[video width="848" height="478" mp4="https://k2kannadanews.in/wp-content/uploads/2024/07/VID-20240731-WA0002.mp4"][/video]
ಘಟನೆ ವಿರೋಧಿಸಿ ತಡರಾತ್ರಿವರೆಗೆ ಪ್ರತಿಭಟನೆ ಮಾಡಲಾಯಿತು. ಸ್ಥಳಕ್ಕೆ ಸಿಪಿಐ ಶಶಿಕಾಂತ್ ಮತ್ತು ಸಿಬ್ಬಂದಿ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ರಾಯಚೂರು ಎಸ್ಪಿ ಮತ್ತು ಅಡಿಷನಲ್ ಎಸ್ಪಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದ್ಯ ಪರೀಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಅಹಿತಕರ ಘಟನೆಯಾಗದಂತೆ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ.