K2kannadanews.in
https://youtu.be/XZUatwKpLJw?si=qXsi4Qn2VNrpvt2D
Crime News ರಾಯಚೂರು : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮಾನ್ವಿ ಯುವಕನೋರ್ವ ಹಾಡಿನ ಮೂಲಕ ಜೀವ ಬೆದರಿಕೆ ಹಾಕಿದ್ದಾನೆ ಎಂಬ ನಿಟ್ಟಿನಲ್ಲಿ ಯುವಕನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಯುವಕನೋರ್ವ ತನ್ನ ಇನ್ಸ್ಟಾಗ್ರಾಮ್ ಪೇಜನಲ್ಲಿ ಪಟ್ಟಣದ ಸೊ ಹೆಲ್ಪ್ ಆಶಾ ಎಂಬ ಯುವಕ ಹವ್ಯಾಸಿ ಹಾಡುಗಾರನಾಗಿದ್ದು, ಈ ಗೆಳೆತನ ಪ್ರೊಫೈಲ್ ನಲ್ಲಿ ಒಂದು ಹಾಡನ್ನು ಬರೆದುಕೊಳ್ಳುವ ಮೂಲಕ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಒಡ್ಡಿದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದ ಮುಂಬೈ ವರ್ಲಿ ಅಪರಾಧ ವಿಭಾಗ ಪೊಲೀಸರು. ಕೂಡಲೇ ತನಿಖೆ ಕೈಗೊಂಡಿದ್ದು ಮಾನ್ವಿಯಿಂದ ಈ ಒಂದು ಪೋಸ್ಟ್ ಅಪ್ಲೋಡ್ ಆಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ.
https://youtu.be/y3ktpCkBCkE?si=Q8wjwse8XnCZM3tX
ಮಾಹಿತಿ ತಿಳಿಯುತ್ತಿದ್ದಂತೆ ಯುವಕನಿಗಾಗಿ ಮುಂಬೈಯಿಂದ ನಿನ್ನೆ ಮಾನವಿ ಪಟ್ಟಣಕ್ಕೆ ಬಂದ ಮುಂಬೈ ಅಪರಾಧ ವಿಭಾಗ ಪೊಲೀಸರು, ವಿಚಾರಣೆ ನಡೆಸಿ ಗ್ಯಾರೇಜ್ ನಲ್ಲಿ ಮೆಕಾನಿಕ್ ಕೆಲಸ ಮಾಡುತಗತಿದ್ದ 24 ವರ್ಷದ ಸೋಹೆಲ್ ಪಾಶಾನನ್ನು ವಶಕ್ಕೆ ಪಡೆದು ತಮ್ಮೊಟ್ಟಿಗೆ ಕರೆದೋಯ್ದಿದ್ದಾರೆ ಎನ್ನಲಾಗುತ್ತಿದೆ.