K2kannadanews.in
stole kidney ದೆಹೆಲಿ : ಭಾರತದಲ್ಲಿ ಕೆಲಸವನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಉದ್ಯೋಗಕ್ಕೆ ಬೇಕಾದ ವೈದ್ಯಕೀಯ ಪರೀಕ್ಷೆಯ ಹೆಸರಿನಲ್ಲಿ ಮೂವರು ಯುವಕರ ಕಿಡ್ನಿಯನ್ನೇ ಕದ್ದ ಘಟನೆ ದೆಹೆಲಿಯಲ್ಲಿ ನಡೆದಿದೆ.
https://youtube.com/shorts/V70v61xnXus?si=uIslZ1tq7YCM47uq
ವರದಿಯ ಪ್ರಕಾರ, ಬಾಂಗ್ಲಾದೇಶದ ಮೂವರು ಯುವಕರ ಕೆಲಸ ಅರಸಿಕೊಂಡು ಭಾರತಕ್ಕೆ ಬಂದಿದ್ದಾರೆ. ಈ ವೇಳೆ ಗುಂಪೊಂದು ಅವರನ್ನು ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಅವರ ಆರೋಗ್ಯ ಪರೀಕ್ಷೆ ಹೆಸರಿನಲ್ಲಿ ಕರೆದೊಯ್ದು ಬಳಿಕ ಅವರ ಕಿಡ್ನಿಯನ್ನು ಕದ್ದಿದ್ದು, ಬಳಿಕ ಆರೋಪಿಗಳು ಸಂತ್ರಸ್ತರ ಬ್ಯಾಂಕ್ ಗೆ ನಾಲ್ಕು ಲಕ್ಷ ಟಾಕಾ ಜಮಾ ಮಾಡಿದ್ದರು.
ಯುವಕರಿಗೆ ಮೂರ್ನಾಲ್ಕು ದಿನಗಳ ಬಳಿಕ ಪ್ರಜ್ಞೆ ಬಂದಾಗ ಕಿಡ್ನಿ ಕಳೆದುಕೊಂಡಿರುವುದು ಗೊತ್ತಾಗಿದೆ. ಕೂಡಲೇ ಮೂವರು ತಮಗಾದ ಮೋಸದ ಬಗ್ಗೆ ತಿಳಿಸಿ ಬಾಂಗ್ಲಾದೇಶಕ್ಕೆ ಮರಳಿದ್ದು, ಈ ಬಗ್ಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
https://youtu.be/RsWxan3rsVY?si=FCHg95XCYamgrAm5