LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ಯಾಸ್ ಎಜನ್ಸಿ ಕಾರ್ಮಿಕ ಆತ್ಮಹತ್ಯೆ : ಕುಟುಂಬಸ್ಥರ ಆಕ್ರಂದನ..

K2kannadanews.in

https://youtu.be/GRO7NIiRu9M?si=EO13nswzFIvdEk_5

Crime News ಮಾನ್ವಿ : ಗ್ಯಾಸ್ ಎಜನ್ಸಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಯೋರ್ವ ವೇತನ ಹೆಚ್ಚಿಸಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಘಟನೆ ಜರುಗಿದೆಪಟ್ಟಣದ ರಾಯಚೂರು ರಸ್ತೆಯಲ್ಲಿನ ಹೋರವಲಯದಲ್ಲಿನ ಜಮೀನೊಂದರಲ್ಲಿ ಪುರುಷನ ಮೃತದೇಹ ಶನಿವಾರ ಪತ್ತೆಯಾಗಿದೆ. ಮೃತನನ್ನು ತಾಲೂಕಿನ ಸೀಕಲ್ ಗ್ರಾಮದ ಚಾಪುಡಿ ಕ್ಯಾಂಪ್ ನಿವಾಸಿ ಜಿಂದಪ್ಪ (38) ಎಂದು ಗುರುತಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಮಾನ್ವಿ ಪಟ್ಟಣದ ಗ್ಯಾಸ್ ಎಜನ್ಸಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಎಂದು ಹೇಳುತ್ತಿದ್ದು ಅತ್ಮಹತ್ಯಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಆತನ ಜೊತೆ ಕೆಲಸ ಮಾಡುತ್ತಿದ್ದವರು ಹೇಳುವ ಪ್ರಕಾರ ವೇತನ ಹೆಚ್ಚಿಸದ ಕಾರಣ ಮನನೊಂದು ಹೀಗೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

https://youtube.com/shorts/3graL0LHlGs?si=XyhTcFB1wxlL2g77

ಮಾಹಿತಿ ದೊರೆಯುತ್ತಿದಂತೆ ಮಾನ್ವಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನೂ ತಂದೆಯನ್ನು ಕಳೆದುಕೊಂಡ ಮಗಳು ತನ್ನ ಅಳಲು ತೋಡಿಕೊಂಡಿದ್ದು ನೋಡಿದ್ರೆ ಎಂಥವರಿಗೂ ಮನಸು ಕರಗುತ್ತೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST