LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೌಟುಂಬಿಕ ಕಲಹ ಹೆಂಡತಿ, ಅಜ್ಜಿ ಬರ್ಬರ ಕೊಲೆಯಲ್ಲಿ ಅಂತ್ಯ..

K2kannadanews.in

Family feud ಮುದುಗಲ್ : ಕೌಟುಂಬಿಕ ಕಲಹ ಹಿನ್ನಲೆ ತನ್ನ ಅಜ್ಜಿ (Grand mother) ಹಾಗೂ ಹೆಂಡತಿಯನ್ನು (Wife) ಬರ್ಬರವಾಗಿ ಹತ್ಯೆ ಮಾಡಿ ಪತಿ ಪರಾರಿಯಾಗಿರುವ (escaped) ಘಟನೆ ಮುದುಗಲ್ ಪಟ್ಟಣದಲ್ಲಿ ನಡೆದಿದೆ.

https://youtu.be/MEaia50UwtM?si=Wjdrp61yaRuQXxPK

ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲೂಕಿನ ಮುದುಗಲ್ (Mudugal) ಪಟ್ಟಣದಲ್ಲಿ ಘಟನೆ ನಡೆದಿದ್ದು, ದ್ಯಾಮಮ್ಮ (66) ಹಾಗೂ ಜ್ಯೋತಿ (23) ಕೊಲೆಯಾದ (Murdered) ದುರ್ದೈವಿಗಳಾಗಿದ್ದಾರೆ. ಇನ್ನೂ ಪತಿ ದುರಗಪ್ಪ ಇಬ್ಬರನ್ನೂ ಹತ್ಯೆಗೈದು ಪರಾರಿಯಾದ ಆರೋಪಿ. ಮುದುಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ (Health center) ಡಿ ಗ್ರೂಪ್ ನೌಕರನಾಗಿದ್ದ (D group worker) ದುರಗಪ್ಪ. ಕುಟುಂಬ ಸಮೇತ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು.

ದುರಗಪ್ಪ ಮದ್ಯ (Drunken) ಸೇವಿಸಿ ಬಂದು ಅಜ್ಜಿ ಹಾಗೂ ಹೆಂಡತಿ ಜೊತೆ ಜಗಳ ತೆಗೆದು ಮನಸೋಇಚ್ಛೆ ಥಳಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಕಳೆದ ರಾತ್ರಿ (Last night) ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಕೊಲೆ ಬಳಿಕ ಪತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುದುಗಲ್ ಪೊಲೀಸರು (Mudugl police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

https://youtu.be/FLSwcVMojzs?si=ACA6KFIfVuSCp_Ud

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST