LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೇಡು ತೀರಿಸಿಕೊಳ್ಳಲು ಸರಕಾರಿ ಬಸ್ ಕದ್ದ ಕುಡುಕ....

K2kannadanews.in


Crime news ಚನ್ನೈ : ಕಂಡಕ್ಟರ್ ಮೇಲಿನ ಸೇಡು ತೀರಿಸಿಕೊಳ್ಳಲು ಕುಡುಕನೊಬ್ಬ ಖಾಲಿ ಬಸ್ಸನ್ನೇ ಅಪಹರಿಸಿದ ಘಟನೆಯೊಂದು ಚನ್ನೈನಲ್ಲಿ ನಡೆದಿದೆ.


https://youtu.be/2SlArtsHzGU?si=jV85HDJJw7pfC5gX

ಹೌದು ತಮಿಳುನಾಡಿನಲ್ಲಿ ವಿಲಕ್ಷಣ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಚೆನ್ನೈ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಬಸ್ಸ್ ಅಪಹರಿಸಿ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಯ ವೇಳೆ ಕೆಲವು ದಿನಗಳ ಹಿಂದೆ ತನ್ನ ಜೊತೆ ಬಸ್​ ಕಂಡಕ್ಟರ್ ಜೊತೆ ಜಗಳವಾಗಿತ್ತು. ಹಾಗಾಗಿ ಸೇಡು ತೀರಿಸಿಕೊಳ್ಳಲು ಖಾಲಿ ಬಸ್ ಅಪಹರಿಸಿರುವುದಾಗಿ ಅಬ್ರಹಾಂ ಬಹಿರಂಗಪಡಿಸಿದ್ದಾನೆ.


ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಿರುವನ್ಮಿಯೂರ್ ಬಸ್ ಟರ್ಮಿನಲ್‌ನಿಂದ ಬ್ರಾಡ್‌ವೇಯಿಂದ ಕೋವಲಂಗೆ ಚಲಿಸುತ್ತಿದ್ದ ಬಸ್ಸನ್ನು ಅಬ್ರಹಾಂ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಆ ಬಸ್ ಖಾಲಿಯಾಗಿತ್ತು. ಬಸ್​ ಅನ್ನು ಹೈಜಾಕ್ ಮಾಡಿ ಬೇರೆಡೆ ತೆಗೆದುಕೊಂಡು ಹೋದ ಕುಡುಕ ಆ ಬಸ್​ ಅನ್ನು ಡಿಕ್ಕಿ ಹೊಡೆಸಿದ್ದಾನೆ. ತಿರುವನ್ಮಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST