LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೈದಿಯಾಗಿ ನಟಿಸಿ, ರಿಯಲ್​​ ಆಗಿ ಬಳ್ಳಾರಿ ಜೈಲಿಗೆ ದರ್ಶನ ಎಂಟ್ರಿ‌..!

K2kannadanews.in


[video width="848" height="480" mp4="https://k2kannadanews.in/wp-content/uploads/2024/08/Video_20240828072838494_by_vidcompact.mp4"][/video]

Darshan Bellary Jail ಬಳ್ಳಾರಿ : ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಶಿಫ್ಟ್ ಆಗುತ್ತಿರುವ ಜಗ್ಗುದಾದನಿಗೂ…ಬಳ್ಳಾರಿ ಜೈಲಿಗೂ ನಂಟು ಇದೆ. ಅದೇನು ಗೊತ್ತಾ.


ಹೌದು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗುತ್ತಿರುವ ದರ್ಶನ್,​ ಈ ಹಿಂದೆ ತಾವು ಅಭಿನಸಿದ್ದ ಚೌಕ ಸಿನಿಮಾ ಶೂಟಿಂಗ್ ಗಾಗಿ ಬಳ್ಳಾರಿ ಜೈಲಿಗೆ ಬಂದಿದ್ದರು. ಆ ಸಿನಿಮಾದಲ್ಲಿ ರಾಬರ್ಟ್​​​ ಪಾತ್ರದಲ್ಲಿ ದರ್ಶನ್​ ಕಾಣಿಸಿಕೊಂಡಿದ್ದರು. ಅಂದು ಸಿನಿಮಾ ಶೂಟಿಂಗ್​ಗಾಗಿ ಹೋಗಿದ್ದ ದರ್ಶನ್,​ ಇಂದು ಅದೇ ಜೈಲಿಗೆ ರಿಯಲ್​​​ ಆಗಿ ಕೊಲೆ ಆರೋಪದಡಿ ಹೋಗುವಂತಾಗಿದೆ.


https://youtu.be/7R0o8ArxrdM?si=RBuY7juro4dQLL0K

1884ರಲ್ಲಿ ನಿರ್ಮಿಸಲಾಗಿರುವ ಬಳ್ಳಾರಿಯ ಜೈಲು ಹೆಚ್ಚು ಭದ್ರತೆ ದೃಷ್ಟಿಯಿಂದ ಮಾತ್ರವಲ್ಲ, ಇದು ಅತ್ಯಂತ ಹಳೆಯ ಜೈಲು ಎಂಬ ಖ್ಯಾತಿ ಪಡೆದಿದೆ. ಗಲ್ಲಿಗೇರಿಸುವ ಏಕೈಕ ಕಾರಾಗೃಹ ಎಂಬ ಹೆಸರನ್ನೂ ಪಡೆದಿದೆ. 9 ಬ್ಯಾರಕ್​​ಗಳ ವ್ಯವಸ್ಥೆ ಇಲ್ಲಿದೆ. ಪ್ರಸ್ತುತ 385 ಕೈದಿಗಳು ಈ ಜೈಲಿನಲ್ಲಿದ್ದು, ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ, ಅಟ್ಯಾಚ್ ಬಾತ್​ ರೂಂ ಇರುವ ಸೆಲ್​​ಗಳು ಇವೆ. ಇನ್ನು ನಟೋರಿಯಸ್ ಬಚ್ಚಾ ಖಾನ್ ಇದೇ ಜೈಲಿನಲ್ಲಿದ್ದು ಸದ್ಯ ಪೆರೋಲ್ ಮೇಲಿದ್ದಾನೆ.


ಕೊಲೆ ಕೇಸ್​ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್​ ಅವರನ್ನು ಬಳ್ಳಾರಿ ಜೈಲ್​​ಗೆ ಶಿಫ್ಟ್ ಮಾಡಲಾಗ್ತಿದೆ. ಹದಿನಾರು ಎಕರೆ ವಿಸ್ತೀರ್ಣದಲ್ಲಿರುವ ಬಳ್ಳಾರಿ ಜೈಲಿನಲ್ಲಿ ಬಿಗಿ ಭದ್ರತೆ ಇದೆ. ಇನ್ನು ನಟ ದರ್ಶನ್​ರನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡ್ತಿರೋ ಬಗ್ಗೆ ಈಗಾಗಲೇ ಜೈಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ವಿಶೇಷ ಭದ್ರತಾ ವಿಭಾಗದ 15ನೇ ಸೆಲ್​ನಲ್ಲಿ ದರ್ಶನ್​ರನ್ನು ಇರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST