K2kannadanews.in
https://youtu.be/9v7Z7KeXxJs?si=a1VB1WdsLdUpSHkp
Accident News ಸಿಂಧನೂರು : ಮುಂದೆ ಹೋಗುತ್ತೀದ್ದ KKRTC ಹೈಟೆಕ್ ಕೊರೋನಾ ಬಸ್ಸಿಗೆ ಹಿಂಬದೊಯಿಂದ ಇನ್ನೊಂದು ಕೊರೋನಾ ಬಸ್ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಿಂಧನೂರು ನಗರದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಸಿಂಧನೂರು ನಗರದಲ್ಲಿನ ಇಂಡಿಯನ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅಪಘಾತ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದಿದ್ದರಿಂದ ವಿಶೇಷವಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಕಲ್ಬುರ್ಗಿ ವಿಭಾಗದ ಎರಡು ಹೈಟೆಕ್ ಬಸ್ಸುಗಳು ಪ್ರಯಾಣಿಕರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿದ್ದವು. ಸಿಂಧನೂರು ನಗರದಲ್ಲಿ ಡಿವೈಡರ್ ಬಳಿ ಕಾರು ತಿರುಗಿಸುತ್ತಿದ್ದ ವೇಳೆ ಸಾರಿಗೆ ಬಸ್ ಏಕಾಏಕಿ ಬ್ರೇಕ್ ಹಾಕಿದೆ. ಈ ವೇಳೆ ಅದೇ ಬಸ್ಸಿನ ಹಿಂಬಾಗದಲ್ಲಿ ಬರುತ್ತಿದ್ದ ಮತ್ತೊಂದು ಬಸ್ಸಿನ ಚಾಲಕನಿಗೆ ವೇಗದಲ್ಲಿ ಇದ್ದ ಕಾರಣ ನಿಯಂತ್ರಣ ಸಿಗದೇ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿನ ಅಂಗಡಿಗೆ ನಗುತ್ತಿದ್ದ ವೇಳೆ ಚಾಲಕ ಬ್ರೇಕ್ ಹಾಕಿದ ಹಿನ್ನೆಲೆ ಬಸ್ ಅಲ್ಲಿಯೇ ನಿಂತು ಇನ್ನೊಂದು ಅನಾಹುತ ತಪ್ಪಿದೆ.
https://youtu.be/Z4n6Sp4qxtc?si=qJs3KGXNVSIuAbwz
ಇನ್ನು ಅಪಘಾತದಲ್ಲಿ ಡಿಕ್ಕಿ ಹೊಡೆದ ಬಸ್ ಚಾಲಕ ಗಾಯಗೊಂಡಿದ್ದು, ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಂತರ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಬಸ್ಸುಗಳನ್ನು ವಾಪಸ್ ಕಲ್ಬುರ್ಗಿ ಘಟಕಕ್ಕೆ ಕೊಂಡಲಾಗಿದೆ. ಇನ್ನೂ ಘಟನೆಯು ಸಿಂಧನೂರು ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.