LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಜವಾಗ್ಲೂ ಬೇರೆ ಕಾರಿನಲ್ಲಿ ಎಸ್ಕೇಪ್ ಆದ್ರ ಶಾಸಕ ದದ್ದಲ್ ಬಸನಗೌಡ..?


K2kannadanews.in




MLA Daddal BasanGowda ರಾಯಚೂರು :‌ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ವಿಚಾರ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಗೆ ಇಡಿ ಬಂಧನ ಭೀತಿ ಶುರುವಾಗಿದೆ. ಯಾರ ಸಂಪರ್ಕಕ್ಕೂ ಸಿಗದ ಶಾಸಕರು, ರಾಯಚೂರಿಗೆ ಬಂದು ಬೆಳಿಗ್ಗೆಯೇ ಮತ್ತೆ ಕಾರ್ಯಕರ್ತರ ಕಾರಿನಲ್ಲಿ ನಗರದಿಂದ ಹೊರಟಿದ್ದಾರೆ.


ಹೌದು ದದ್ದಲ್ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸಾಕಷ್ಟು ದಾಖಲೆಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಬಂಧನ ಭೀತಿಯಲ್ಲಿರುವ ದದ್ದಲ್, ಕಳೆದ ಎರಡು ಮೂರು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ಅಜ್ಞಾತ ಸ್ಥಳದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.


https://youtu.be/0a-WxC9Dx5k?si=jIHHYv5Hq2bCZXmf

ಆದರೆ ಇಂದು ಬೆಳಿಗ್ಗೆ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿರುವ ದದ್ದಲ್, ಮಾಧ್ಯಮಗಳ ಕ್ಯಾಮರಾ ಕಾಣ್ಣು ತಪ್ಪಿಸಿ, ಕಾರ್ಯಕರ್ತರ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸರಕಾರದ ಕಾರುಬಿದ್ದರು ಖಾಸಗಿ ಕಾರಿನಲ್ಲಿ ಮಂತ್ರಾಲಯ ಮಾರ್ಗ ಹೊಡಿದಿದ್ದಾರೆ ಎನ್ನಲಾಗುತ್ತಿದೆ. ಆದರೇ ಶಾಸಕರು ಬೆಂಗಳೂರಿಗೆ ಹೋಗಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಕೆಲವರು ಶಾಸಕರು ವಿಶಾಕಪಟ್ಟಣಂ ಕಡೆ ಹೊರಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST