LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲಾ ಬಸ್ - ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಗಂಭೀರ ಗಾಯ..

K2kannadanews.in

Accident News ಮಾನ್ವಿ : ಕೆಕೆಆರ್‌ಟಿಸಿ ಬಸ್ ಮತ್ತು ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ಕು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಹಲವು ವಿದ್ಯಾರ್ಥಿಗಳು ಗಾಯಗಳಾದ ಘಟನೆ ಕಪಗಲ್ ಕ್ರಾಸ್ ಬಳಿ ನಡೆದಿದೆ.

https://youtu.be/nV5EbGm8aUY?si=KJPXnCsux5hOkU__

ಹೌದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ಘಟನೆ ನಡೆದಿದ್ದು, ಖಾಸಗೀ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು ಕಾಲುಗಳು ತುಂಡಾಗಿವೆ. ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಖಾಸಗೀ ಶಾಲೆ ಬಸ್ ಮಕ್ಕಳನ್ನು ಕರೆದುಕೊಂಡು ಮಾನ್ವಿ ಕಡೆಗೆ ಹೊರಟಿತ್ತು, ಮಾನ್ವಿಯಿಂದ ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್. ಎರಡು ಬಸ್ಸುಗಳ ನಡುವೆ ಅಪಘಾತ ಸಂಭವಿಸಿದೆ ತಪ್ಪು ಯಾರದು ಎಂಬ ಬಗ್ಗೆ ತನಿಕೆಯಿಂದಲೇ ಹೊರ ಬೀಳಬೇಕಿದೆ. ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾನ್ವಿ ಪೊಲೀಸ್ ಠಾಣಾ ಪೊಲೀಸರು ತನಿಖೆ ಆರಂಬಿಸಿದ್ದಾರೆ.

https://youtu.be/QcRJysT0BS0?si=l9DXUtMDb8MLjY6E
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST