LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಟ್ಟಿ : ಆಕಳು ಕರುವಿನ ಮೇಲೆ ದಾಳಿ ಮಾಡಿದ ಚಿರತೆ

K2kannadanews.in

leopard attack ಲಿಂಗಸುಗೂರು : ಚಿರತೆಯೊಂದು ಆಕಳು (Cow) ಕರುವಿನ (calf) ಮೇಲೆ ದಾಳಿ ಮಾಡಿ ಕೊಂದು (kill)ಹಾಕಿದ ಘಟನೆ ಗದ್ದಿಗಿ ಗ್ರಾಮದಲ್ಲಿ ನಡೆದಿದೆ.


https://youtu.be/MQzPdq6wo2E?si=1mwOLExJbQS1YuS1

ರಾಯಚೂರು (Raichur) ಜಿಲ್ಲೆ ಲಿಂಗಸೂಗೂರು (Lingasuguru) ತಾಲ್ಲೂಕಿನ ಗದ್ದಿಗಿ ಗ್ರಾಮದ ಹನುಮಂತ ಪೂಜಾರಿ ಎಂಬುವರಿಗೆ ಸೇರಿದ ಆಕಳ ಕರುವೊಂದು ಬಲಿಯಾಗಿದೆ. ಗುರುಗುಂಟಾ (Gurugunta) ಹೋಬಳಿ ವ್ಯಾಪ್ತಿಯ ಪೈದೊಡ್ಡಿ, ಗದ್ದಗಿ ಗ್ರಾಮದಲ್ಲಿ ಆಗಾಗ ಚಿರತೆ ಪ್ರತಕ್ಷವಾಗಿ ದನಕರುಗಳ ಮೇಲೆ ದಾಳಿ (Attack) ನಡೆಸಿ ಭಕ್ಷಿಸುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳ ಜನರಲ್ಲಿ ಭಯ ಮೂಡಿಸಿದೆ.

ಇತ್ತೀಚೆಗೆ ಪೈದೊಡ್ಡಿ ಗ್ರಾಮ‌ ಸೇರಿ ಕೆಲವು ಕಡೆ ಚಿರತೆ ಕಂಡಾಗ, ಅದನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನುಗಳನ್ನು ಇರಿಸಿದ್ದಾರೆ. ಆದರೆ ಇವರೆಗೂ ಚಿರತೆ ಬೋನಿಗೆ ಬಿದ್ದಿಲ್ಲ. ಕೆಲ ದಿನಗಳ ಹಿಂದಷ್ಟೆ ಒಂದು ಆಕಳನ್ನು ಕೊಂದು ಹಾಕಿತ್ತು. ಭಾನುವಾರ ಸಂಜೆ ಕರುವನ್ನು ಬಲಿ ಪಡೆದಿದೆ. ಆದಷ್ಟು ಬೇಗ ಚಿರತೆ ಹಿಡಿದು ಬೇರೆಡೆ ಸ್ಧಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

https://youtu.be/njK7liHvIVQ?si=yQM5GxE10nZoDLrN

ಸಂಜೆಯಾದರೆ ಗ್ರಾಮಸ್ಥರು ಮನೆ ಬಿಟ್ಟು ಹೊರ ಬರದಂತಾಗಿದೆ. ಜಮೀನಿಗೆ ಹೋಗಲು ಜನರು ಹಿಂಜರಿಯುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗಲು ಭಯ ಪಡುವ ಸ್ಧಿತಿ ಎದುರಾಗಿದೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಬಂದು‌ ಹೋಗುತ್ತಿದ್ದಾರೆ. ಚಿರತೆ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST