LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಡಿದ ಅಮಲಿನಲ್ಲಿ ಜಗಳಾರಂಭವಾಗಿ ಕೊಲೆಯಲ್ಲಿ ಅಂತ್ಯ..

K2kannadanews.in

Crime News ಬೆಂಗಳೂರು : ಬಾರ್​ನಲ್ಲಿ ಕುಳಿತು ಮಧ್ಯ ಸೇವಿಸುತ್ತಿದ್ದವರಿಗೆ ಸದ್ದು ಮಾಡದಂತೆ ಇರಲು ಹೇಳಿದ್ದಕ್ಕೆ ಕೊಲೆ ನಡೆದಿರುವಂತಹ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ದಾರುಣ ಘಟನೆ ನಡೆದಿದ್ದು ಪ್ರಕರಣದ ಸಂಬಂಧ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಈ ಒಂದು ಕೊಲೆ ನಡೆದಿದೆ. ಬಾರ್ ಒಂದರಲ್ಲಿ ಎಣ್ಣೆ ಒಡೆಯುತ್ತಿದ್ದವರಿಗೆ ಸೌಂಡ್ ಮಾಡಬೇಡ ಎಂದ ಕಾರಣಕ್ಕೆ ಗಲಾಟೆ ಆರಂವಾಗಿದೆ. ಅದು ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ, ಮದ್ಯ ಅಮಲಿನಲ್ಲಿದ್ದ ಇಬ್ಬರೂ ಆರೋಪಿಗಳು ಪಾರ್ಕಿಂಗ್ ಟೈಲ್ಸ್​ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸ್ಥಳದಲ್ಲಿಯೇ ಸರ್ವೇಶ್ ಮೃತಪಟ್ಟಿದ್ದಾನೆ. ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲಿಸರು ಕೋಡಲೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ. ತನಿಖೆ ಆರಂಬಿಸಿ, ಹಂತಕರ ವಿಳಾಸ ಪತ್ತೆ ಹಚ್ಚಿದ್ದಾರೆ.

https://youtu.be/BYqJbV1j8LA?si=FlhdlRyZvWlWS_Qk

ಕೊಲೆಗೈದು ರೂಂನಲ್ಲಿ ನಿದ್ರೆ ಮಾಡುತ್ತಿದ್ದ ರಾಹುಲ್ ಕುಮಾರ್(27), ಸಹದೇವ್ ತುರಿ(45) ಇವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಜಾರ್ಖಂಡ್‌ನ ಮೂಲಸವರಾಗಿದ್ದು, ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ವರ್ಷದ ಹಿಂದೆ ಪತ್ನಿ ಮತ್ತು ಮಗನ ಜೊತೆ ಬೆಂಗಳೂರಿಗೆ ಬಂದು ಕೊಲೆಯಾದ ಸರ್ವೇಶ ಎಂಬಾತ‌ ಒಂದು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದಿದ್ದ. ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST