LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೆದ್ದೇ ಬಿಟ್ಟಿತು ಆರ್ ಸಿ ಬಿ : ರಾಯಚೂರಿನಲ್ಲಿ ಅಭಿಮಾನಿಗಳ ಸಂಬ್ರಮ ಹೆಗಿತ್ತು ನೋಡಿ..

K2kannadanews.in

IPL News ರಾಯಚೂರು : 2025ನೇ ಸಾಲಿನ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಇತ್ತ ರಾಯಚೂರಿನಲ್ಲಿ ಅಭಿಮಾನಿಗಳ ಸಂಬ್ರಮ ಮುಗಿಲು ಮುಟ್ಟಿದೆ.

https://youtu.be/nMaa_98lIN4?si=itpIdR0YckcQ_vNd

ಹೌದು ರಾಯಚೂರು ಜಿಲ್ಲೆಯಾದ್ಯಂತ ಅಭಿಮಾನಿಗಳ ಸಂಬ್ರಮಕ್ಕೆ ಪಾರವೇ ಇರಲಿಲ್ಲ ಎಂಬಂತಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 190 ರನ್ ಗಳಿಸಿತ್ತು. 191 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 184 ರನ್‌ ಗಳಿಸಲಷ್ಟೇ ಶಕ್ತವಾಯಿತು.

ರಾಯಚೂರು ನಗರದ ಮಹಿಳಾ ಸಮಾಜ, ಆಶಾಪುರ ರಸ್ತೆ ಸೇರಿ ಹಲವೆಡೆ ಅಭಿಮಾನಿಗಳ ಸಂಬ್ರಮ ಪಂದ್ಯ ಗೆಲ್ಲುತ್ತಿದ್ದಂತೆ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಬೈಕ್‌ ರ‌್ಯಾಲಿ ಮಾಡುವ ಮುಖಾಂತರ ಸಂಭ್ರಮಿಸಿದರು. ಇನ್ನು ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

https://youtu.be/3BXiZgofNXA?si=SMpaMvBV_WLabHwV
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST