LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕಲಪರ್ವಿ ಶಾಲೆಯಲ್ಲಿ ಮತದಾರ ದಿನ ಆಚರಣೆ : ಪ್ರತಿಜ್ಞಾವಿಧಿ ಭೋದನೆ.

https://youtu.be/DizgJyYaric?si=ZMFUkdmAWxuhV0YU

ಸಂವಿಧಾನ ದೇಶದ ಪ್ರಜೆಗಳಿಗೆ ಕೊಟ್ಟಿರುವ ಮಹತ್ತರವಾದ ಹಕ್ಕು. ಮತದಾನ ಹಕ್ಕು ಈ ಬಗ್ಗೆ ಜಾಗೃತರಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ದೈಹಿಕ ಶಿಕ್ಷಕರಾದ ಲಾಲ್ ಸಾಬ್ ಅವರು ಶುಕ್ರವಾರ 10 ಗಂಟೆಗೆ ಹೇಳಿದರು.

ಮಾನ್ವಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಜನವರಿ 25 ಮತದಾರ ದಿನಾಚರಣೆ ಮತ್ತು ನೇತಾಜಿ ಸಭಾಷ ಚಂದ್ರ ಭೋಸ್ ಜಯಂತಿ ಆಚರಿಸಲಾಯಿತು. ಮೊದಲಿಗೆ ಜಯಂತಿ ಹಿನ್ನಲೆ ಸುಭಾಷ ಚಂದ್ರ ಭೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಾಯಿತು. ನಂತರ ಮತದಾರ ದಿನಾಚರಣೆ ಅಂಗವಾಗಿ ಎಲ್ಲ ಮಕ್ಕಳಿಗೆ ಪ್ರತಿಜ್ಞಾ ಬೀದಿ ಬೋಧಿಸಲಾಯಿತು. ಈ ವೇಳೆ ಮಾತನಾಡಿದ ಶಾಲೆಯ ದೈಹಿಕ ಶಿಕ್ಷಕರಾದ ಲಾಲ್ ಸಾಬ್, ಭಾರತ ದೇಶದ ಸಂವಿಧಾನದ ಪ್ರಕಾರ ಪ್ರತಿಯೋಂದು ಪ್ರಜೆಯ ಹಕ್ಕು ಮತದಾನ, 18 ವರ್ಷ ತುಂಬುತ್ತಿದ್ದಂತೆ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಮತದಾನದ ಹಕ್ಕು ದೊರೆಯುತ್ತದೆ. ಇದನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಉತ್ತಮ ವ್ಯಕ್ತಿಯನ್ನು ಆರಿಸುವ ಕೆಲಸ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಶಾಲೆಯ ಶಿಕ್ಷಕರಾದ ಸುರೇಶ, ಸೈಯದ್, ರಮೇಶ, ಮಹೇಶ, ಜಗದೀಶ ಮತ್ತು ನಾಂದಿ ಫೌಂಡೇಶನ್ ಕೌಶಲ್ಯ ತರಬೇತುದಾರರಾದ ನೀಲಕಂಠ ಸ್ವಾಮಿ, ರಿಯಾಜ್, ನಂದಿನಿ ಉಪಸ್ಥಿತರಿದ್ದರು.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST