LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೊಲೀಸ್ ಭದ್ರತೆಯಲ್ಲಿ : ಸಿಎ ಸೈಟ್ ನಲ್ಲಿದ್ದ ಶಿವನ ದೇವಸ್ಥಾನ ತೆರವು..


K2kannadanews.in


Temple demolish ರಾಯಚೂರು : ನಗರದ ಚಂದ್ರಬಂಡಾ ರಸ್ತೆಯಲ್ಲಿನ ಸಂತೋಷ ನಗರದಲ್ಲಿನ ಸಿಎ ಸೈಟ್ ಒಂದರಲ್ಲಿ ನಿರ್ಮಿಸಲಾಗಿದ್ದ ಶಿವ ಮತ್ತು ಗಣೇಶ ದೇವಸ್ಥಾನವನ್ನು ಅಧಿಕಾರಿಗಳು ಮಂಗಳವಾರ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ್ದಾರೆ.


https://youtu.be/tc1Ii9WwtiA?si=Bdpu9gbpwrHj9cNZ

ರಾಯಚೂರು ನಗರದ ಸಂತೋಷ ನಗರದಲ್ಲಿನ ಸಿಎ ಸೈಟ್ ನಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಿಸಲು 2022ರ ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಸೈಟ್ ಮಂಜೂರಾಗಿತ್ತು. ಕೆಲವರು ಅಲ್ಲಿ ನಿರ್ಮಿಸಿದ್ದ ಶೆಡ್ ನಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸ್ಥಳ ಕಬಳಿಸುವ ಹುನ್ನಾರ ನಡೆಸಿದ್ದರು. ಈ ಸ್ಥಳ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದವು. ಆದರೂ ಯಾರು ಕ್ರಮ ಕೈಗೊಂಡಿರಲಿಲ್ಲ. ಕಳೆದ ರಾತ್ರಿ ಸಹಾಯಕ ಆಯುಕ್ತ ಗಜಾನನ ಬಾಲೆ ನೇತೃತ್ವದಲ್ಲಿ ನೂರಾರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ದೇವಸ್ಥಾನ, ಶೆಡ್ ತೆರವು ಗೊಳಿಸಲಾಗಿದೆ. ಎಲ್ ಬಿ ಎಸ್ ನಗರ ಪ್ರೌಢಶಾಲೆಯ ಹೆಸರಿಗೆ ಜಾಗ ಮಂಜೂರಾಗಿದ್ದು, ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಸಹ ಬಿಡುಗಡೆಯಾಗಿತ್ತು. ತೆರವು ಕಾರ್ಯಕ್ಕೆ ಸ್ಥಳೀಯರು ವಿರೋಧಿಸಿದ್ದು, ‌ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯ ನಡೆಸಲಾಯಿತು.





ನಗರಸಭೆ ಪೌರಾಯುಕ್ತ ಸಿದ್ದಯ್ಯ ಹೀರೆಮಠ, ಹೆಚ್ಚುವರಿ ಎಸ್ ಪಿ ಶಿವಕುಮಾರ್ ಮತ್ತು ಹರೀಶ್, ಮೂವರು ಡಿವೈಎಸ್ ಪಿಗಳು, 10ಕ್ಕೂ ಹೆಚ್ಚು ಪಿಐಗಳು, ನೂರಾರು ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST