LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಪೂರ್ತಿಯ ಚಿಲುಮೆ ಸುಧಾ ಮೂರ್ತಿ

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು

ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ
ತಪ್ಪು ಸರಿ ಬೆಪ್ಪು ಜಾಣಂದಕುಂದಗಳ ಬಗೆ
ಯಿಪ್ಪತ್ತು ಸೇರೆ ರುಚಿ – ಮಂಕುತಿಮ್ಮ

ಎಂಬಂತೆ, ಒಂದಷ್ಟು ಲೇಖನ, ಕಥೆ, ಹಾಸ್ಯಬರಹ, ಕವಿತೆ, ಚುಟುಕು, ಹೀಗೆ ಸಾಗುವ ಬರವಣಿಗೆಗಳ ಮಧ್ಯದಲ್ಲಿ ಸಮಾಜದ ಒಳಿತಿಗೆ ಶ್ರಮಿಸುವ ಮತ್ತು ಚಿಂತಿಸುವ ಸಜ್ಜನರಲ್ಲಿ ಒಬ್ಬರಾದ ಶ್ರೀಮತಿ ಸುಧಾ ಮೂರ್ತಿಯವರ ಮೇಲಿನ ಅಭಿಮಾನ ಅಕ್ಷರರೂಪ ಪಡೆದು ಪುಸ್ತಕವಾಗಿದೆ.

https://youtu.be/HC7kKPS6dpc?si=rJQs7AKJcX-7i17d

ಅತ್ಯತ್ತಮ ಲೇಖಕಿ ಮತ್ತು ಸಮಾಜಸೇವಕಿಯಾಗಿರುವ ಪದ್ಮಶ್ರೀ ಸುಧಾಮೂರ್ತಿಯವರ ವಿಷಯಗಳು ಇಂಗ್ಲಿಷ್, ಹಿಂದಿ, ಕನ್ನಡ, ತೆಲಗು, ಮರಾಠಿಯಂತಹ ವಿವಿಧ ಭಾಷೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೋಡಸಿಗುತ್ತವೆ ಎಂಬುದು ತಿಳಿದ ವಿಷಯವೇ ಆದರೂ, ಹೆಮ್ಮೆಯ ಕನ್ನಡತಿಯ ವಿವಿರ ಬರಹ ರೂಪದಲ್ಲಿ ಕನ್ನಡದಲ್ಲಿ ಕನ್ನಡಿಗರೆಲ್ಲರಿಗೂ ಸಿಗಬೇಕೆಂಬ ಸದುದ್ದೇಶದಿಂದ “ಸ್ಪೂರ್ತಿಯ ಚಿಲುಮೆ ಸುಧಾ ಮೂರ್ತಿ” ನಿಮ್ಮ ಮುಂದಿದೆ.

ಅವರ ಜೀವನದ ಪುಸ್ತಕದಲ್ಲಿ, ನಮ್ಮ ಜೀವನಕ್ಕೆ ಬೇಕಾದ ಹಲವಾರು ಅಂಶಗಳು ಕಲಿಯಸಿಗುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ, ಮುಖ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರೀಮತಿ ಸುಧಾ ಮೂರ್ತಿಯವರ ಜೀವನಗಾಥೆಯನ್ನು ಓದುವ ಮೂಲಕ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು.

ಭಾರತದ ಪ್ರಪ್ರಥಮ ಮಹಿಳಾ ಇಂಜಿನಿಯರ್ ಆದಂತಹ ಶ್ರೇಷ್ಠ ಲೇಖಕಿ ಶ್ರೀಮತಿ ಸುಧಾ ಮೂರ್ತಿಯವರು ಹೆಣ್ಣೆಂಬ ಕಾರಣವನ್ನು ಹಿಂದೆಬಿಟ್ಟು, ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಪ್ರಥಮ ಸ್ಥಾನ ಕಾಯ್ದುಕೊಂಡು, ಟೆಲ್ಕೊ ಎಂಬ ಟಾಟಾ ಕಂಪನಿಯಲ್ಲಿಯೂ ಸಹ ಪ್ರಥಮ ಮಹಿಳಾ ಇಂಜಿನಿಯರ್ ಆಗಿ ಸೇರಿ ಗಟ್ಟಿ ಹೆಜ್ಜೆ ಇಟ್ಟು ಸಾಧಿಸಿ ತೋರಿಸಿದುದರ ಬಗ್ಗೆ, ಇನ್ಫೋಸಿಸ್ ಫೌಂಡೇಶನ್ ಮೂಲಕ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಬಗ್ಗೆ, ಇಂದಿಗೂ ರಾಜ್ಯಸಭಾ ಸದಸ್ಯೆಯಾಗಿ ಕಾಳಜಿಪರ ಸುಧಾರಣೆಗಳನ್ನು ಮಾಡುತ್ತಿರುವ ಬಗ್ಗೆ, ಅವರ ಸಾಧನೆಗೆ ಸ್ಪೂರ್ತಿಯಾದ ಅವರ ಹಿರಿಕರ ಬಗ್ಗೆ, ಅವರ ನಲ್ಮೆಯ ಪತಿ ಲಕ್ಷಾಂತರ ಜನರ ಬಾಳಿನ ಬೆಳಕಾಗಿರುವ ಇನ್ಫೋಸಿಸ್ ರುವಾರಿಗಳಾದ ಶ್ರೀ ನಾರಾಯಣ ಮೂರ್ತಿಯವರ ಬಗ್ಗೆ ಹಾಗೂ ಅವರ ಜೀವನಯಾನದಲ್ಲಿ ಬರುವ ಮಾಜಿ ರಾಷ್ಟ್ರಪತಿ, ಅತ್ಯುತ್ತಮ ವಿಜ್ಞಾನಿ ದಿವಂಗತ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ, ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಶ್ರೇಷ್ಠ ರಾಜಕಾರಣಿ ಶ್ರೀ ನರೇಂದ್ರ ಮೋದಿಜಿಯವರ ಕೆಲವು ಯೋಜನೆಗಳ ಬಗ್ಗೆ, ದೇಶಪ್ರೇಮಿ ಸರಳ ವ್ಯಕ್ತಿತ್ವದ ರತನ್ ಟಾಟಾ ಬಗ್ಗೆ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಬಗ್ಗೆ ಹೀಗೆ ಶ್ರೀಮತಿ ಸುಧಾಮೂರ್ತಿಯವರ ಬಾಳಿನುದ್ದಕ್ಕೂ ಬರುವ ಹಲವಾರು ಗಣ್ಯರ ವಿಷಯಗಳನ್ನು ಕೊಂಚ ಮಟ್ಟಿಗೆ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಜೊತೆಗೆ ಸುಧಾ ಮೂರ್ತಿಯವರ ಗ್ರಂಥಗಳ ಸವಿವರವಾದ ಮಾಹಿತಿ, ಕಸ್ತೂರಿ ಕನ್ನಡದ ಹಲವು ವಿಷಯಗಳು, ವಿದೇಶಗಳಲ್ಲಿಯೂ ಭಾರತದ ರಾಯಭಾರಿಯಂತಿರುವ ಸಿನಿಮಾ ನಾಯಕ-ನಾಯಕಿಯರು, ಇತಿಹಾಸ, ಪುರಾಣ, ಪೌರಾಣಿಕ ಸ್ಥಳಗಳು ಹೀಗೆ ಭಾರತದ ಹಲವಾರು ವಿಷಯಗಳ ಮಾಹಿತಿಯೂ ಸಹ ಇಲ್ಲಿ ಓದಸಿಗುತ್ತದೆ. ಈ ಎಲ್ಲಾ ಅಂಶಗಳಿಂದ “ಸ್ಪೂರ್ತಿಯ ಚಿಲುಮೆ ಸುಧಾ ಮೂರ್ತಿ” ಪುಸ್ತಕ, ಭಾರತೀಯರೆಲ್ಲರಿಗೂ ಅತ್ಯುತ್ತಮ ಹೊತ್ತಿಗೆಯಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ. ಹಾಗಾಗಿ ನಿಮ್ಮ ಮನೆಯ ಮನದ ಜ್ಞಾನಭಂಡಾರದಲ್ಲಿ ಈ ಪುಸ್ತಕವೂ ಜಾಗಪಡೆಯಲಿ.

✍🏻
ರಶ್ಮಿ ಕೆ. ವಿಶ್ವನಾಥ್
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST