LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂಧನೂರು : ಭಾರಿ ಗಾಳಿ ಮಳೆ, ದಾಳಿಂಬೆ ಬೆಳೆದ ರೈತರಿಗೆ ಸಂಕಷ್ಟಗಳ..

K2kannadanews.in

https://youtu.be/-0QHjiVtIPE?si=5gG9A8boegiz6k2k

Local News ಸಿಂಧನೂರು : ಕಳೆದ ಎರಡು ದಿನದ ಹಿಂದೆ ಸುರಿದ ಭಾರೀ ಗಾಳಿ ಮತ್ತು ಮಳೆಯಿಂದ ಹುಡಾ, ಗೊಬ್ಬರಕಲ್, ಸೋಮಲಾಪುರ ಮತ್ತು ಮುಕ್ಕುಂದಾ ಗ್ರಾಮಗಳಲ್ಲಿ ಬೆಳೆದ ದಾಳಿಂಬೆ ಬೆಳೆ ನೆಲಕ್ಕೆ ಬಿದ್ದು ಅಪಾರ ನಷ್ಟವುಂಟಾಗಿದ್ದು, ರೈತರು ತೀವ್ರ ಸಂಕಷ್ಟ ಸ್ಥಿತಿ ಅನುಭವಿಸುವಂತಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ಹಲವು ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರತಿ ಎಕರೆಗೆ ಕನಿಷ್ಠ 5 ಟನ್ ದಾಳಿಂಬೆ ಬೆಳೆ ಬರುತ್ತದೆ. 1 ಟನ್‍ಗೆ ಕನಿಷ್ಠ 1 ಲಕ್ಷ ಆದಾಯ ಬರುತ್ತದೆ. ಸುಮಾರು 75 ಸಾವಿರ ಎಕರೆಯಲ್ಲಿ ಬೆಳೆದ ದಾಳಿಂಬೆ ಹಾನಿಯಾಗಿರುವುದರಿಂದ ಕೋಟಿಗಟ್ಟಲೇ ನಷ್ಟ ಉಂಟಾಗಿದೆ. ಇನ್ನು ಒಂದು ತಿಂಗಳಲ್ಲಿ ದಾಳಿಂಬೆ ಕೈಗೆ ಬರುತ್ತಿದೆ ಎನ್ನುವಷ್ಟರಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ಹುಡಾ ಗ್ರಾಮದ ರೈತ ಮಲ್ಲಿಕಾರ್ಜುನ ಅಳಲು ತೋಡಿಕೊಂಡರು. ಪ್ರತಿ ಎಕರೆಗೆ ಚಾಟ್ನಿ ಮಾಡುವುದು, ಕೊಟ್ಟಿಗೆ ಗೊಬ್ಬರ, ಕ್ರಿಮಿನಾಶಕ, ಕೂಲಿ, ಬಿಸಿಲಿನಿಂದ ರಕ್ಷಣೆ ಮಾಡಲು ಹಾಕಿದ ಪರದೆ ಸೇರಿದಂತೆ 2.50 ಲಕ್ಷಕ್ಕೂ ಹೆಚ್ಚು ಖರ್ಚು ತಗುಲುತ್ತದೆ ಎಂದು ರೈತರು ಹೇಳುತ್ತಾರೆ.

https://youtu.be/fmuSMwn08TA?si=dJvaxmzVSS9fRHGB
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST