K2kannadanews.in
Crocodile lake ರಾಯಚೂರು : ನಗರದ ಮಾವಿನ ಕೆರೆಯಲ್ಲಿ ಬೆಳ್ಳಂ ಬೆಳಗ್ಗೆ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಮೊಸಳೆಯನ್ನ ಅರಣ್ಯ ಇಲಾಖೆ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಹಿಡಿಯುವ ಕಾರ್ಯ ಆರಂಭವಾಗಿದೆ.
[video width="632" height="360" mp4="https://k2kannadanews.in/wp-content/uploads/2024/08/Video_20240807132518900_by_vidcompact.mp4"][/video]
ಹೌದು ರಾಯಚೂರು ನಗರದ ಐತಿಹಾಸಿಕ ಮಾವಿನಕೆರೆಯ ಇಂದ್ರಾನಗರ ಮತ್ತುಗೋಲ್ ಮಾರ್ಕೆಟ್ ಬಡಾವಣೆ ಮಧ್ಯದಲ್ಲಿ ಇರುವಂತಹ ಸ್ಥಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಜನ ಕುತೂಹಲದಲ್ಲಿ ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ರಾಜೇಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಮೊಸಳೆ ಹಿಡಿಯುವ ಕೆಲಸ ಆರಂಭಿಸಿದ್ದಾರೆ.