LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವಿಲಿನ ಚೆಲುವು ಮನಮೋಹಕ

https://youtu.be/HC7kKPS6dpc?si=JA84i8hKfR6f8CDP

ನವಿಲು ಭಾರತದ ರಾಷ್ಟ್ರ ಪಕ್ಷಿ, ಅದರ ಸೌಂದರ್ಯ ಕವಿಗಳಿಗೆ, ಕಲಾವಿದರಿಗೆ ಸ್ಪೂರ್ತಿದಾಯಕ. ವರ್ಷಕಾಲದ ಮೋಡಗಳು ಮಳೆ ಸುರಿಯಲು ಕಲೆಯುವಾಗ ಸಂತೋಷದಿಂದ ಗರಿಗೆದರಿ ಕುಣಿಯುವ ನವಿಲಿನ ಚೆಲುವು ಮನಮೋಹಕ.

ನವಿಲು ಭಾರತ ಮತ್ತು ಸಿಂಹಳಗಳಲ್ಲಿ ಹೆಚ್ಚಾಗಿ ವಾಸಿಸುವ ಪಕ್ಷಿ. ಇದು ಪಾವೊ ಕುಲಕ್ಕೆ ಸೇರಿದ್ದು. ಇದರ ತಲೆ ಮತ್ತು ಕತ್ತು ನೀಲಿ, ಬೆನ್ನು ಹಸಿರು, ಮುಖದ ಚರ್ಮ ಬಿಳುಪು, ರೆಕ್ಕೆ ಕೆಂಪು ಮಿಶ್ರಿತ ನಸು ಹಳದಿ, ಕಾಲು ಉದ್ದ. ತಲೆಯ ಮೇಲೆ ಗರಿಗಳು ತುರಾಯಿಯಂತಿವೆ. ಗಂಡು ನವಿಲಿಗೆ ಬೆನ್ನಿನಲ್ಲಿ ಹಸಿರು ಬಣ್ಣದ ಗರಿಗಳು ಮೂಡಿರುತ್ತವೆ. ಅದರಲ್ಲಿ ಕಣ್ಣಿನಂತೆ ಕಾಣುವ ಪ್ರಕಾಶಮಾನವಾದ ಚುಕ್ಕೆಗಳಿರುತ್ತವೆ. ಗಂಡು ನವಿಲಿನ ಸೊಬಗು ಇರುವುದೇ ಈ ಗರಿಗಳಲ್ಲಿ. ಹೆಣ್ಣು ನವಿಲಿಗೆ ಇಂಥ ಗರಿಗಳಿರುವುದಿಲ್ಲ. ಗಾತ್ರದಲ್ಲಿ ಗಂಡಿಗಿಂತ ಚಿಕ್ಕದು. ನವಿಲಿನ ಧ್ವನಿ ಮಾತ್ರ ಗಡಸು.

ಕಾಳುಗಳು, ಬೀಜಗಳು, ಸರಿಸೃಪ ಮತ್ತು ಕೀಟಗಳು ನವಿಲಿನ ಆಹಾರ, ಅಲಂಕಾರ ಪ್ರಾಯವಾದ ನವಿಲನ್ನು ಬಹುವಾಗಿ ಪಳಗಿಸಿಕೊಳ್ಳಬಹುದು. ಸಾಧಾರಣವಾಗಿ ಎಲ್ಲಾ ಪ್ರಾಣಿ ಸಂಗ್ರಹಾಲಯಗಳಲ್ಲೂ ನವಿಲುಗಳನ್ನು ಸಾಕುತ್ತಾರೆ.

ಬೇಟಿ ಕಾಲದಲ್ಲಿ ಗಂಡು ನವಿಲು ತನ್ನ ಗಡಸು ಕಂಠದಿಂದ ಹೆಣ್ಣು ನವಿಲನ್ನು ಕರೆಯುತ್ತದೆ. ಅದರ ಮುಂದೆ ತನ್ನ ಗರಿಗಳನ್ನು ಬೀಸಣಿಗೆ ಆಕಾರದಲ್ಲಿ ಹರಡಿ ಕುಣಿಯುತ್ತದೆ. ವಸಂತ ಕಾಲದಲ್ಲಿ ಹೆಣ್ಣು ನವಿಲು ಸುಮಾರು 10 ಬಿಳಿಯ ಮೊಟ್ಟೆಗಳನ್ನು ಇಡುತ್ತದೆ. ನೆಲದಲ್ಲಿ ಗೂಡು ಕಟ್ಟಿ, ಮೊಟ್ಟೆ ಇರಿಸುತ್ತದೆ. ತಾಯಿ ನವಿಲು ಎಂಟು ತಿಂಗಳವರೆಗೆ ಮರಿಯನ್ನು ಜೋಪಾನ ಮಾಡುತ್ತದೆ. ಮೂರನೆಯ ವರ್ಷದಲ್ಲಿ ಮರಿಗೆ ಗರಿ ಬೆಳೆಯಲಾರಂಬಿಸುತ್ತದೆ. ಒಂದೊಂದು ಗಂಡು ನವಿಲಿಗೆ ಎರಡರಿಂದ ಐದು ಹೆಣ್ಣು ನವಿಲುಗಳು ಸಂಗಾತಿಗಳಾಗಿರುತ್ತವೆ. ದೊಡ್ಡ ಗರಿಗಳಿದ್ದರೂ ಗಂಡು ನವಿಲು ಸ್ವಲ್ಪ ದೂರ ಮಾತ್ರ ಹಾರಬಲ್ಲದು.

ಗುಂಪಾಗಿ ವಾಸಿಸುವ ಕಾಡು ನವಿಲುಗಳು ರಾತ್ರಿಯನ್ನು ಮರಗಳ ಮೇಲೆ ಕಳೆಯುತ್ತವೆ. ಜಾವಾ, ಬರ್ಮಾ, ಥೈಲೆಂಡ್ ಮತ್ತು ಮಲೆಯಗಳಲ್ಲಿರುವುದು ಹಸಿರು ನವಿಲುಗಳು. ಭಾರತದ ನವಿಲಿಗಿಂತ ಇದರ ಕಾಲು ಉದ್ದ. ನವಿಲುಗಳಲ್ಲಿ ಬಿಳಿ ಮತ್ತು ಕಪ್ಪು ಗರಿಯುಳ್ಳವುಗಳು ಇರುತ್ತವೆ.

 



ಉದಂತ ಶಿವಕುಮಾರ್
ಲೇಖಕ, ಬೆಂಗಳೂರು-560056
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST