https://youtu.be/qiZuA-bqK28?si=RQlCI3T6v7supV8t
ಪ್ರಸಕ್ತ ವರ್ಷ(2026)ದ ಮೊದಲ ಖಗ್ರಾಸ ಚಂದ್ರಗ್ರಹಣ ಇಂದು ಸಂಭವಿಸಲಿದೆ. ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ.
ಇಂದು ಸಂಭವಿಸಲಿರುವ ಚಂದ್ರಗ್ರಹಣ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಪೂರ್ಣವಾಗಿ ಗೋಚರಿಸಲಿದ್ದು, ಕರ್ನಾಟಕದಲ್ಲಿ ಸಂಜೆ ಭಾಗಶಃ ಗೋಚರವಾಗಲಿದೆ. ಮದ್ಯಾಹ್ನ 3.20 ಕ್ಕೆ ಪ್ರಾರಂಭವಾಗಿ ಸಂಜೆ 6.47 ಕ್ಕೆ ಕೊನೆಗೊಳ್ಳಲಿದೆ.
ಅಂದರೆ ಕರ್ನಾಟಕದಲ್ಲಿ ಸಂಜೆ ಚಂದ್ರೋದಯದ ಸಮಯದಲ್ಲಿ 6.26 ರಿಂದ 6.46 ರವರೆಗೆ ಭಾಗಶಃ ಕೆಂಪು ಚಂದ್ರನ ಬಿಂಬವನ್ನು 20 ನಿಮಿಷಗಳ ಕಾಲ ಬರಿಗಣ್ಣಿನಲ್ಲಿಯೇ ಪ್ರತಿಯೊಬ್ಬರೂ ನೋಡಬಹುದಾಗಿದೆ. ಯಾವುದೇ ಉಪಕರಣಗಳ ಅಗತ್ಯವೂ ಇಲ್ಲ. ಆಕಾಶದಲ್ಲಿ ನಡೆಯುವ ನೆರಳು ಬೆಳಕಿನ ಆಟಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ಭೂಮಿಯ ನೆರಳು ಚಂದ್ರನ ಮೇಲೆ ಭಾಗಶಃ ಬೀಳುವುದರಿಂದ ನೆರಳಿನ ಸ್ವಲ್ಪ ಭಾಗವನ್ನು ನೋಡಬಹುದಾಗಿದೆ. ಇದಕ್ಕಾಗಿ ದೇವಸ್ಥಾನಗಳ ಬಾಗಿಲು ಹಾಕುವ ಅವಶ್ಯಕತೆಯೂ ಇಲ್ಲ. ಗ್ರಹಣ ಸಂಭವ ಕಾಲದಲ್ಲಿ ಯಾರ ಮೇಲೆಯೂ ಪ್ರಭಾವವೂ ಇಲ್ಲ. ಮೌಢ್ಯತೆಯನ್ನು ತೊರೆದು ವೈಜ್ಞಾನಿಕವಾಗಿ ಆಲೋಚಿಸಿ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.