LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಸ್ಕಿ : ಈ ಸರ್ಕಾರಿ ಶಾಲೆಗೆ ಈಜಿಕೊಂಡು ಹೋಗಬೇಕು, ನಂತರ ಕೆಸರುಗದ್ದೆ ಆಗುತ್ತದೆ..!

K2kannadanews.in

Rain problem ಮಸ್ಕಿ : ಈ ಒಂದು ಗ್ರಾಮದಲ್ಲಿ ಸ್ವಲ್ಪ ಮಳೆಯಾದರೂ ಸಾಕು, ಇಲ್ಲಿನ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಜಲಾವೃತಗೊಂಡು ಮಕ್ಕಳು ಶಾಲೆಗೆ ಈಸಿಕೊಂಡು ಹೋಗಬೇಕು ಅಥವಾ ಕೆಸರುಗದ್ದೆಯಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

https://youtu.be/f7MPOIdxLbg?si=emSPx8NSo__vKPHi

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಿನ್ನಾಪೂರ ಗ್ರಾಮದಲ್ಲಿ ಘಟನೆ ನಡೆದಿದ್ದು. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ ಆದರೆ ಅದಕ್ಕೆ ತಕ್ಕಂತೆ ಹಲವು ಸಮಸ್ಯೆಗಳು ಕೂಡ ಉದ್ಭವಿಸುತ್ತಿವೆ. ಹೆಚ್ಚಿನ ಮಳೆಯಾದ್ರೆ ಮಕ್ಕಳು ಶಾಲೆಗೆ ಈಜಿ ಹೋಗಬೇಕಾದ ಪರಿಸ್ಥಿತಿಗೆ ತಲುಪುತ್ತದೆ. ಕಳೆದ ಮೂರು ವರ್ಷಗಳಿಂದ ಈ ಸರ್ಕಾರಿ ಶಾಲೆಗೆ ಇದೇ ಪರಿಸ್ಥಿತಿ ಇದೆ. ಶಾಲೆ ಸಿಬ್ಬಂದಿ, ಗ್ರಾಮಸ್ಥರು ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಆಗುತ್ತಿಲ್ಲ. ಹಳ್ಳದ ಪಕ್ಕದೇಲ್ಲೇ ಶಾಲೆ ನಿರ್ಮಿಸಿದ್ದರಿಂದ ಅಲ್ಪ ಮಳೆಯಾದ್ರು ಶಾಲೆಗೆ ನೀರು ನುಗ್ಗುತ್ತೆ. ಮೈದಾನ ಅಭಿವೃದ್ಧಿ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಖರ್ಚಾದ್ರೂ ಶಾಲಾ ಮೈದಾನ ಮಾತ್ರ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಗ್ರಾಮಪಂಚಾಯತಿ, ಶಿಕ್ಷಣ ಇಲಾಖೆಯ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

https://youtu.be/9PYOKNm1Mv8?si=-EMr5PRl93xfwnad
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST