LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡೆಹ್ರಾಡೂನ್ ಭೂಕುಸಿತದ ಭೀಕರ ದೃಶ್ಯ ವೈರಲ್..

K2kannadanews.in

https://youtube.com/shorts/uMpWr7iTrZg?si=ZogLeFlSp0TuxVC8

Viral video ಉತ್ತರಖಂಡ : ಉತ್ತರಾಖಂಡದ ಹೆಲಾಂಗ್-ಮಾರ್ವಾರಿ ಬೈಪಾಸ್‌ನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಭೂ ಕುಸಿತದ ಭೀಕರ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ವೀಡಿಯೋದಲ್ಲಿ ಕಾಣುತ್ತಿದ್ದಂತೆ ಭೂಕುಸಿತ ಸಂಭವಿಸುತ್ತದೆ. ಈ ವೇಳೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಮಾರ್ವಾರಿ ಬೈ ಪಾಸ್ ಕೆಲಸ ನಡೆಯುತ್ತಿದೆ. ಇದೇ ವೇಳೆ ಚಮೋಲಿ ಜೋಶಿಮಠದ ಹೆಲಾಂಗ್-ಮಾರ್ವಾರಿ ಬೈಪಾಸ್‌ನಲ್ಲಿರುವ ಗುಡ್ಡದಿಂದ ಹಠಾತ್ ಭಾರೀ ಭೂಕುಸಿತದಿಂದಾಗಿ ಯಂತ್ರವು ಇಲ್ಲಿ ಹೂತುಹೋಗಿದೆ.

https://youtu.be/OO1coyzde80?si=JgmxZi66ANvI63c9

ಈ ಅವಘಡ ಸಂಭವಿಸಿದಾಗ ಕಾರ್ಮಿಕರು ಕೆಲಸದಲ್ಲಿ ತಲ್ಲೀನರಾಗಿದ್ದರು. ಅವರತ್ತ ಬಂಡೆ ಉರುಳುತ್ತಿದ್ದಂತೆಯೇ ಓಡಿ ಹೋಗುವ ಮೂಲಕ ಕಾರ್ಮಿಕರು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಎಂಬುದಾಗಿ ವರದಿಯಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST