LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂಧನೂರಿನಲ್ಲಿ ಭಾರಿ ಮಳೆ : ಕೆರೆಯಾದ ಹೆದ್ದಾರಿಗಳು..

K2kannadanews.in

Rain ರಾಯಚೂರು : ಸಿಂಧನೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

https://youtu.be/PQN5dPE8qOE?si=PKEY-HUfr73tMAqI

ರಾಯಚೂರು ಜಿಲ್ಲೆಯಾದ್ಯಂತ ಮಳೆಯಾರ್ಭಟ ಜೋರಾಗಿದ್ದು, ಎಡೆಬಿಡದೆ ಸುರಿದ ಮಳೆಯಿಂದಾಗಿ ನಗರದ ಹೆದ್ದಾರಿಗಳಲ್ಲಿ ಮೊಳಕಾಲುದ್ದ ನೀರು ನಿಂತು ವಾಹನ ಸವಾರರ ಪರದಾಡುವಂತಾಗಿತ್ತು. ಹೆದ್ದರಿಯಲ್ಲು ಮಳೆ‌‌ ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆ ಮೇಲೆಯೇ ನಿಂತ ನೀರಿನಿಂದ ವಾಹನಗಳು ಚಲಾಯಿಸಲು ಹರಸಾಹಸಪಟ್ಟರು.

ಇತ್ತ ಸಿಂಧನೂರು ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ಹೊಕ್ಕು ನಿವಾಸಿಗಳಿಗೂ ಸಂಕಷ್ಟ ತಂದಿತ್ತು. ಮನೆಯಿಂದ ನೀರು ಹೊರಹಾಕಲು ನಿರಂತರ ಪ್ರಯತ್ನ ಮಾಡಿದರೂ ಸಾದ್ಯವಾಗುತ್ತಿರಲಿಲ್ಲ. ಧಾರಾಕಾರ ಮಳೆ ಹಿನ್ನೆಲೆ ಸಿಂಧನೂರು ನಗರದಲ್ಲಿ ಮಿನಿ ಪ್ರವಾಹ ಪರಸ್ಥಿತಿ‌ಎದುರಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST