LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ಬಸ್‌ನಲ್ಲಿ ಭೂತ ಪ್ರಯಾಣ : ವೀಡಿಯೋ

K2kannadanews.in


ghost in bus ದೆಹೆಲಿ : ಸರಕಾರಿ ಸಾರಿಗೆ (Government bus) ಬಸ್ಸಿನಲ್ಲಿ ಭೂತ ಪ್ರಯಾಣ (cost raid) ಮಾಡಿರುವ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ವೀಡಿಯೋ (Video)  ‌ಒಂದು ವೈರಲ್ (Viral) ಆಗಿದೆ.


https://youtu.be/kELPi9zlkcs?si=Tawxfcffud-K1V1_

ರಾಷ್ಟ್ರ (National) ರಾಜಧಾನಿ (Capital) ದೆಹೆಲಿಯಲ್ಲಿ ಈ ಒಂದು ವಿಚಿತ್ರ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಬಿಇನ್ ಫಾರೆವರ್ ಅನ್ನೋ ಸೋಶಿಯಲ್ ಮೀಡಿಯಾ (Social Media) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸಾರಿಗೆ ಬಸ್‌ನಲ್ಲಿ ಭೂತ ಪ್ರತ್ಯಕ್ಷ ಎಂದು ಉಲ್ಲೇಖಿಸಿದ್ದಾರೆ. ಘಟನೆ ಕುರಿತು ವಿವರಣೆಯನ್ನೂ ನೀಡಲಾಗಿದೆ. ದೆಹಲಿಯ ಸಾರಿಗೆ ಬಸ್ ದಿನದ ಕರ್ತವ್ಯ ಮುಗಿಸಿದ ಬಳಿಕ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಮಧ್ಯ ರಾತ್ರಿಯಲ್ಲಿ ಬಸ್ ಪಾರ್ಕ್ ಮಾಡಿದ ಬಳಿಕ ಕಂಡಕ್ಟರ್, ಬಸ್ ಪರಿಶೀಲಿಸುತ್ತಾರೆ. ಈ ವೇಳೆ ಕಂಡಕ್ಟರ್‌ಗೆ ಭೂತದ ಅನುಭವವಾಗಿದೆ ಎಂದು ಹೇಳಿದ್ದಾರೆ.


https://youtube.com/shorts/jGthCLwsbuc?si=vMjynvt8GRcDouCt

ಪರಿಶೀಲನೆ ವೇಳೆ ಎಲ್ಲಾ ಸೀಟುಗಳು ಖಾಲಿಯಾಗಿತ್ತು. ಆದರೆ ಡ್ರೈವರ್ ಸೀಟು ಬಳಿ ಬರುತ್ತಿದ್ದಂತೆ ಕಂಡಕ್ಟರ್‌ಗೆ ಅಚ್ಚರಿಯಾಗಿದೆ. ಕಾರಣ ಡ್ರೈವರ್ ಸೀಟಿನ ಬಳಿ ಇರುವ ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬರು ಸೀಟಿನಲ್ಲಿ ಕುಳಿತಿರುವಂತೆ ಕಂಡಿದೆ. ಮತ್ತೊಮ್ಮೆ ಪರಿಶೀಲಿಸಿದಾಗ ಸೀಟಿನಲ್ಲಿ ಯಾರೂ ಇಲ್ಲ ಅನ್ನೋ ಖಾತ್ರಿಯಾಗಿದೆ. ಆದರೆ ಸೀಟಿನಲ್ಲಿ ನೀರಿನ ಬಾಟಲಿ ಇಡಲಾಗಿತ್ತು. ಸಿಸಿಟಿವಿಯಲ್ಲಿ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ಕುಳಿತಿರುವ ದೃಶ್ಯ ಕಾಣುತ್ತಿದೆ. ಈ ವಿಡಿಯೋ ಬೆನ್ನಲ್ಲೇ ಭಾರಿ ಚರ್ಚೆ ಶುರುವಾಗಿದೆ. ಇದು ನಕಲಿ ಅನ್ನೋ ವಾದವಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST