LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇವದುರ್ಗದ ಹೂವಿನಹೆಡಗಿ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆ..

https://youtu.be/8OluSbCLYWM?si=axzzjZ4KF5TX6fa7

K2kannadanews.in
Local News ದೇವದುರ್ಗ : ಮಹಾರಾಷ್ಟ್ರದ ಪಶ್ವಿಮ ಘಟ್ಟದಲ್ಲಿ ಅತಿಯಾದ ಮಳೆಯಾದ ಹಿನ್ನೆಲೆ ಕೃಷ್ಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಬಳಿ ಇರುವ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಪಶ್ಚಿಮ ಘಟಗಳಲ್ಲಿ ಸುರಿದ ಮಳೆಯಿಂದ ಬಸವಸಾಗರ ಜಲಾಶಯದಿಂದ ಹರಿದು ಬರುತ್ತಿರುವ ನೀರಿನಿಂದ ದೇವಸ್ಥಾನ ಮುಳುಗಡೆಯಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದ್ರೆ ಹೂವಿನಹೆಡಗಿ ಸೇತುವೆ ಮುಳುಗಡೆ ಭೀತಿ ಎದುರಾಗಿದೆ. ಇದೇ ರೀತಿ ನೀರಿನ ಒಳ ಹರಿವು ಹೆಚ್ಚಾದರೇ ದೇವದುರ್ಗದಿಂದ ಯಾದಗಿರಿ, ಕಲಬುರಗಿ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ಸದ್ಯ ಬಸವಸಾಗರ ಜಲಾಶಯದಿಂದ 75 ಸಾವಿರ ಕ್ಯೂ ಹೊರಹರಿವು ಇದ್ದು, ಜಲಾಶಯದ 25 ಗೇಟ್ ಗಳಿಂದ ಹೊರಹರಿವು ಇದೆ. ಬಸವಸಾಗರ ಜಲಾಶಯಕ್ಕೆ 75,000 ಕ್ಯೂ ಒಳಹರಿವು ಇದೆ. ನದಿಗೆ ಜನ ಜಾನುವಾರು ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

https://youtu.be/rClsCGlR2LE?si=Pa4lTcvF-lTqJCk_

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST